Banner Ad

ಸುದ್ದಿ ಕನ್ನಡ ನ್ಯೂಸ್ ಪಣಜಿ:  ಪ್ರತಿ ವರ್ಷದಂತೆಯೇ ಪ್ರಸಕ್ತ ವರ್ಷವೂ ಕೂಡ ಕಿಚ್ಚ ಸುದೀಪ್ ಅಭಿಮಾನಿ ಬಳಗ ಗೋವಾ ವತಿಯಿಂದ ಸಪ್ಟೆಂಬರ್ 2 ರಂದು ವಾಸ್ಕೊದಲ್ಲಿ ವಿಶೇಷವಾಗಿ ಕಿಚ್ಚನ ಹುಟ್ಟುಹಬ್ಬ ಆಚರಿಸಲಾಯಿತು. ಅಂಗವಿಕ ಕೈಯ್ಯಲ್ಲಿ ಕೇಕ್ ಕತ್ತರಿಸಿ, ಅನ್ನದಾನ ಮಾಡಿ, ಕಿಚ್ಚನ ಚಲನಚಿತ್ರ ಹಾಡಿ ಕುಣಿದು ಅಭಿನಯ ಚಕ್ರವರ್ತಿ ಕಿಚ್ಚನ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂರ್ದದಲ್ಲಿ ಗೋವಾ ಕಿಚ್ಚ ಸುದೀಪ ಅಭಿಮಾನಿ ಬಳಗದ ಅಧ್ಯಕ್ಷ ಕೃಷ್ಣ ಕಿಚ್ಚ-ಸುದ್ಧಿಗಾರರೊಂದಿಗೆ ಮಾತನಾಡಿ- ಪ್ರತಿ ವರ್ಷದಂತೆಯೇ ಪ್ರಸಕ್ತ ವರ್ಷವೂ ಕೂಡ ಸಪ್ಟೆಂಬರ್ 2 ಕಿಚ್ಚನ ಅಭಿಮಾನಿಗಳಿಗೆ ಹಬ್ಬ. ಈ ಹಬ್ಬವನ್ನು ನಾವು ಗೋವಾದಲ್ಲಿ ಕಿಚ್ಚ ಅಭಿಮಾನಿ ಬಳಗದ ವತಿಯಿಂದ ಅದ್ದೂರಿಯಾಗಿ ಆಚರಿಸಿದ್ದೇವೆ. ನಾವು ಅಂಗವಿಕಲರ ಕೈಯಿಂದ ಕೇಕ್ ಕತ್ತರಿಸಿ ಅನ್ನದಾನ ಮಾಡಿ, ಕಿಚ್ಚನ ಚಲನಚಿತ್ರದ ಹಾಡುಗಳನ್ನು ಹಾಡಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಸದ್ದೇವೆ. ಮುಂಬರುವ ದಿನಗಳಲ್ಲಿ ಕಿಚ್ಚನ ಎಲ್ಲ ಚಲನಚಿತ್ರಗಳು ಯಶಸ್ವಿಯಾಗಲಿ, ಜೀವನದಲ್ಲಿ ಅವರು ಇನ್ನೂ ಎತ್ತರಕ್ಕೆ ಏರಲಿ, ಎಲ್ಲವೂ ಒಳ್ಳೆಯದಾಗಲಿ ಎಂದು ನಾವೆಲ್ಲ ದೇವರ ಬಳಿ ಪ್ರಾರ್ಥಿಸುತ್ತೇವೆ ಎಂದು ಹೇಳಿ ಕಿಚ್ಚ ಸುದೀಪ್ ರವರಿಗೆ ಹುಟ್ಟುಹಬ್ದದ ಶುಭಾಷಯ ಕೋರಿದರು.

Banner Ad

ಈ ಸಂದರ್ಭದಲ್ಲಿ ಗೋವಾ ಕಿಚ್ಚ ಸುದೀಪ ಅಭಿಮಾನಿ ಬಳಗದ ಉಪಾಧ್ಯಕ್ಷ ಸಮೀರ್, ಕಾರ್ಯದರ್ಶಿ ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಶ್ರೀಧರ್, ಸದಸ್ಯರಾದ ಹನುಮಂತ, ಪ್ರಶಾಂತ, ಅಭಿಷೇಕ, ಕೆಡೆಪ್ಪ, ರಮೇಶ್ ಕುಮಾರ್, ಸೇರಿದಂತೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಿಚ್ಚನ ಹುಟ್ಟು ಹಬ್ಬವನ್ನು ಸಂಭ್ರಮಿಸಿದರು.

Banner Ad