ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನಲ್ಲಿ ಈಗಾಗಲೇ ನಿರ್ಮಾಣ ವಾದ ಬಿ ಎಸ್ ಎನ್ ಎಲ್ ಟವರ್ ಗಳಿಗೆ ಉಪಗ್ರಹ ಆಧಾರಿತ ನೆಟ್ವರ್ಕ್ ನೀಡಲಾಗುವದು ಎಂದು ಸಂಸದರ ಕಚೇರಿ ಯಿಂದ ತಿಳಿದು ಬಂದಿದೆ ಕೇಂದ್ರ ಸರಕಾರ ಜೋಯಿಡಾ ತಾಲೂಕಿನ ಗ್ರಾಮೀಣ ಜನರ ಅನುಕೂಲಕ್ಕೆ ಎಂದು 47 ಬಿ ಎಸ್ ಎನ್ ಎಲ್ ಟವರ್ ನಿರ್ಮಿಸಿ ಜನರ ಯೋಗ ಕ್ಷೆಮಕ್ಕೆ ಬೆಂಗಾವಲಾಗಿ ಇರುವ ಪ್ರಯತ್ನ ಮಾಡಿತ್ತು ಆದರೆ ಅರಣ್ಯ ಇಲಾಖೆ ಸರಕಾರದ ಯೋಜನೆ ಹಳ್ಳ ಹಿಡಿ ಯುವಂತೆ ಮಾಡಿದ್ದು ಈಗ ಸಾರ್ವಜನಿಕ ರಿಗೆ ತಿಳಿದಿದೆ.

ತಾಲೂಕಿನಲ್ಲಿಯ ಬಿ ಎಸ್ ಎನ್ ಎಲ್ ಟವರ್ ಗಳು ನಿರ್ಮಾಣ ವಾಗುವಾಗ ಸುಮ್ಮಮಿದ್ದ ಅರಣ್ಯ ಇಲಾಖೆ ನಂತರ ಸಮಸ್ಯೆ ತಂದೊಡ್ಡಿದೆ. ಅಣಶಿ, ಪಣಸೋಲಿ, ಬಜಾರ್ ಕುಣಂಗ್ ಟವರ್ ಗಳಿಗೆ ಎರಡು ಮೂರು ವರ್ಷ ಗಳಿಂದ ನೆಟ್ವರ್ಕ್ ನೀಡಿಲ್ಲ ಎಂಬ ಸಾರ್ವಜನಿಕ ರ ಕೂಗಿಗೆ, ಪಣಸೋಲಿಯಲ್ಲಿ ನೆಟ್ವರ್ಕ ಸದ್ಯ ನೀಡಲಾಗಿದೆ ಬಜಾರ್ ಕುಣಂಗ್ ಅಣಶಿ ಸಮಸ್ಯೆ ಗಳು ಇರುವಾಗಲೇ ಈಗ ನುಜ್ಜಿ. ಲಾಂಡೆ ಮತ್ತು ಬಾಡಪೋಲಿ ಟವರ್ ಗಳಿಗೆ ಮೂರು ವರ್ಷ ಗಳಿಂದ ನೆಟ್ವರ್ಕ್ ನೀಡಿಲ್ಲ ಟವರ್ ಸುತ್ತ ಮುತ್ತಲು ಕಳೆ ಕಸ ಬೆಳೆದಿದೆ ಎಂದು ಅಲ್ಲಿನ ಸ್ಥಳೀಯರು ದೂರಿದ್ದಾರೆ ಜನರ ದೂರಿಗೆ ಸುದ್ಫಿ ಕನ್ನಡ ಸ್ಪಂದಿಸಿದೆ.

ಬಿ ಎಸ್ ಎನ್ ಎಲ್ ಸಮಸ್ಯೆಗೆ ಸಂಸದರಾದ ವಿಶ್ವೇಶ್ವರ ಹೆಗಡೆ ಅವರು ಉತ್ತಮ ಸ್ಪಂದನೆ ನೀಡಿದ್ದಾರೆ ಜೋಯಿಡಾ ತಾಲೂಕಿನ ಜನತೆಗೆ ಉತ್ತಮ ಸಂದೇಶ ಕೂಡ ನೀಡಿದ್ದಾರೆ, ಈಗಾಗಲೇ ನಿರ್ಮಾಣ ವಾದ ಬಿ ಎಸ್ ಎನ್ ಎಲ್ ಟವರ್ ಗಳಿಗೆ ಉಪಗ್ರಹ ಆಧಾರಿತ ನೆಟ್ವರ್ಕ ಕೂಡಲೇ ನೀಡಲಾಗುವದು ಮತ್ತು ಆ ಕೆಲಸ ಸದ್ಯದಲ್ಲೇ ಆರಂಭ ವಾಗಲಿದೆ ಎಂದು ಅವರ ಕಚೇರಿ ಯಿಂದ ತಿಳಿಸಲಾಗಿದೆ. ಜೊತೆಗೆ ಕೆಲವು ಟವರ್ ಗಳು ಇನ್ನೂ ನಿರ್ಮಾಣ ವಾಗಿಲ್ಲ ಆ ಬಗ್ಗೆ ಕೂಡಲೇ ಕೆಲಸ ಆಗುವಲ್ಲಿ ಸಂಸದರು ಗಮನಿಸಲಿ ಎಂಬ ಕಳಕಳಿ ಕೂಡ ತಾಲೂಕಿನ ಜನತೆಯದಾಗಿದೆ. ತಾಲೂಕಿನ ಜನರು ಕೇಳುವುದಿಷ್ಟೇ ಸರಕಾರ ಜನತೆಯಿಂದ ಎಲ್ಲ ರೀತಿಯ ಕರಗಳನ್ನು ವಸೂಲಿ ಮಾಡಿದ ಮೇಲೆ ಮೂಲಭೂತ ಸೌಕರ್ಯ ಗಳನ್ನು ಕೊಡಲು ಹಿಂದೇಟು ಹಾಕುವುದು ಯಾಕೆ ಎನ್ನುವುದಾಗಿದೆ.