ಸುದ್ದಿ ಕನ್ನಡ ವಾರ್ತೆ

ಜೊಯಿಡಾ : ಗಡಿ ತಾಲೂಕಾದ ಜೊಯಿಡಾದಲ್ಲಿ ಕನ್ನಡ ಭಾಷೆ ಸಂಸ್ಕೃತಿ, ಸಾಹಿತ್ಯವನ್ನು ಕೆಟ್ಟಿಬೆಳೆಸುವಲ್ಲಿ ಸಾಹಿತ್ಯ ಪರಿಷತ್ ಅಮುಲಾಗ್ರ ಸೇವೆ ಸಲ್ಲಿಸುತ್ತಿದೆ ಎಂದು ಮರಾಠಾ ಸಮಾಜ ಅಧ್ಯಕ್ಷ ಚಂದ್ರಕಾಂತ ದೇಸಾಯಿ ಹೇಳಿದರು.

ಅವರು ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಜೊಯಿಡಾ ಮತ್ತು ಮುರಾರ್ಜಿ ವಸತಿ ಶಾಲೆ ಇವರ ಸಹಯೋಗದಲ್ಲಿ ಇಂದು ನಡೆದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಉಪನ್ಯಾಸ ನೀಡಿದ ದಸ್ತಗಿರಿ ಸಾಬ್ ಅಂಬಳನೂರ್ ಕನ್ನಡ ಸಾಹಿತ್ಯ, ಮನಸ್ಸು, ಹೃದಯವನ್ನು ಗೆಲ್ಲುವಂತ ಸಾಹಿತ್ಯ, ಕನ್ನಡ ಭಾಷೆ ಜನಮನ ರಂಜಿಸುವ, ಪ್ರೀತಿಸುವ ಸುಂದರ ಭಾಷೆಯಾಗಿದೆ. ಕನ್ನಡ ನಮ್ಮ ಆಸ್ತಿಯಾಗಲಿ ಎಂದರು.

ಕ.ಸಾ.ಪ ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ ಮಕ್ಕಳು ಕನ್ನಡದ ಆಸ್ತಿ, ಕನ್ನಡ ಉಳಿಸಿ ಬೆಳೆಸುವ ನಿಮ್ಮೆಲ್ಲರ ಬದುಕು ಉಜ್ವಲವಾಗಲಿ ಎಂದರು.

ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿದರು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ ಮಂಥೆರೊ ಉದ್ಘಾಟಿಸಿದರು,

ವೇದಿಕೆಯಲ್ಲಿ ಪ್ರಿನ್ಸಿಪಾಲ್ ಗಿರಿಶ ಕುಮಾರ್ ಹಿರೇಮಠ, ಕುಣಬಿ ಸಮಾಜ ತಾಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ, ಶಿಕ್ಷಕ ಪ್ರಮೋದ ವೇರಣೆಕರ ಸ್ವಾಗತಿಸಿದರು, ಪ್ರದೀಪ್ ಪರಾಳೆ ನಿರುಪಿಸಿದರು, ಲಠನ ದೇಸಾಯಿ ವಂದಿಸಿದರು, ವಿರೇಶ ನಿಡುವಣೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು, ಗೀತಗಾಯನ, ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯಲ್ಲಿ ಒಟ್ಟು 41 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಲ್ಲರಿಗೂ ಸಾಹಿತ್ಯ ಪುಸ್ತಕ, ನೊಟಬುಕ್ ಮತ್ತು ಕನ್ನಡ ಶಾಲನ್ನು ನೀಡಿ ಗೌರವಿಸಲಾಯಿತು. ಮುರಾರ್ಜಿ ಶಾಲೆಯ ಸಿಬ್ಬಂದಿಗಳು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಘಟಿಸಿದರು.