Banner Ad

ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಡಪೋಲಿಯಲ್ಲಿ ಗ್ರಾಮೀಣ ತಂಡಗಳ ಮೂರು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಶ್ರೀ ಸೋಮನಾಥ ಯುವ ಕ್ಲಬ್ ವತಿಯಿಂದ ನಡೆಯಲಿದೆ.

Banner Ad

ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ 20,21,22 ರಂದು ನಡೆಯಲಿರುವ ಕ್ರಿಕೆಟ್ ಟೂರ್ನಿಯನ್ನು ಗಣ್ಯರು ಉದ್ಘಾಟಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಪ್ರಥಮ,ದ್ವಿತೀಯ ಬಹುಮಾನ ಹಾಗೂ ಪಂದ್ಯ ಶ್ರೇಷ್ಠ,ಸರಣಿ ಶ್ರೇಷ್ಠ, ಉತ್ತಮ ಬ್ಯಾಟ್ಸಮನ್, ಉತ್ತಮ ಬೌಲರ್‌, ಉತ್ತಮ ಆಲ್ ರೌಂಡರ ಇನ್ನುಳಿದ ಆಕರ್ಷಕ ವೈಯುಕ್ತಿಕ ಬಹುಮಾನಗಳು ಇವೆ.

ಪಂದ್ಯಾವಳಿಯಲ್ಲಿ ನಿರ್ಣಾಯಕರ ಹಾಗೂ ಸಂಘಟಕರ ತಿರ್ಮಾನವೇ ಅಂತಿಮ,ಸಂಘಟಕರಿಂದ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ,ಹೆಚ್ಚಿನ ಮಾಹಿತಿಯನ್ನು ಸಂಘಟಕರನ್ನು ಸಂಪರ್ಕಿಸಿ,ಎಲ್ಲರೂ ಕ್ರೀಡಾಕೂಟವನ್ನು ಯಶಸ್ವಿ ಗೊಳಿಸಿಕೊಡಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

Banner Ad