ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಪೇಲಿಕ್ರಾಸ್ ನಲ್ಲಿ ನಡೆದ ನಾಗೋಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ವಾಗೇಲಿಯ ವಿದ್ಯಾರ್ಥಿಗಳು ಒಟ್ಟು 10 ಬಹುಮಾನಗಳನ್ನು ಪಡೆದು ಶಾಲೆಗೆ ಮತ್ತು ಊರಿಗೆ ಕೀರ್ತಿ ತಂದಿದ್ದಾರೆ.
ಹಿರಿಯರ ವಿಭಾಗ ಪ್ರಸಾದ ಪ್ರಕಾಶ ಸಾವಂತ (ಕನ್ನಡ ಕಂಠಪಾಠ, ಹಿಂದಿ ಕಂಠಪಾಠ)ಚಂದನಾ ಮಣಕೋ ಸಾವಂತ (ಭಕ್ತಿ ಗೀತೆ,ಅಭಿನಯ ಗೀತೆ) ವಿಶಾಲ ದೇವಿದಾಸ ಸಾವಂತ (ಮಿಮಿಕ್ರಿ), ಶಿವರಾಜ್ ಮನೋಹರ ಸಾವಂತ (ಧಾರ್ಮಿಕ ಪಠಣ) ದ್ವಿತೀಯ. ಕಿರಿಯರ ವಿಭಾಗ:ಮನಶ್ವಿನಿ ಸಂತೋಷ ಸಾವಂತ (ಕನ್ನಡ ಕಂಠಪಾಠ, ಭಕ್ತಿಗೀತೆ), ವೈಭವ ಗಣಪತಿ ಸಾವಂತ (ಆಶು ಭಾಷಣ)ದ್ವಿತೀಯ. ಜ್ಯೋತಿ ಅಶೋಕ ಸಾವಂತ (ಧಾರ್ಮಿಕ ಪಠಣ)ತೃತೀಯ.ಈ ಸಾಧನೆಗಳ ಜೊತೆ ಪ್ರಜ್ಞಾ, ವಿಶ್ವನಾಥ, ಗೌತಮ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರು,ಎಸ್.ಡಿ.ಎಮ್.ಸಿ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಶಾಲೆಯ ಹಳೆಯ ವಿದ್ಯಾರ್ಥಿಗಳು,ಪಾಲಕರು,ಪೋಷಕರು,ಊರಿನ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
