ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಅತಿ ಹಿಂದುಳಿದ ತಾಲೂಕು ಜೋಯಿಡಾ ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ,13 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ದಿನಾಂಕ:10-11-2025 ರ ಬೆಳಿಗ್ಗೆ 10.00 ಗಂಟೆಗೆ ಕಿರವತ್ತಿಯಿಂದ ಪಾದಯಾತ್ರೆಯ ಮುಖಾಂತರ ಆಗಮಿಸಿ ತಹಶೀಲ್ದಾರ ಕಚೇರಿ ಎದುರು ಹಗಲು -ರಾತ್ರಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿಯನ್ನು ಒಳಗೊಂಡ ಪತ್ರವನ್ನು ಜೋಯಿಡಾ ತಹಶೀಲ್ದಾರ ಅವರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಅಧ್ಯಕ್ಷ ಪ್ರೇಮಾನಂದ ವೇಳಿಪ, ತಾಲೂಕಾ ಕಾರ್ಯದರ್ಶಿ ರಾಜೇಶ ಗಾವಡಾ,ದೀಪಕ ವೇಳಿಪ,ದೀಲಿಪ ವೇಳಿಪ ನೀಡಿದರು.
