Banner Ad

ಸುದ್ದಿ ಕನ್ನಡ ವಾರ್ತೆ

. ಶಿರಸಿ:ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಂಘ ಶತಾಬ್ದಿ ನಿಮಿತ್ತ ಪಥಸಂಚಲನ ಹಾಗೂ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತೀಯ ಕಾರ್ಯದರ್ಶಿಗಳಾದ ಗೋಪಾಲ ಜೀ ನಾಗರಕಟ್ಟೆ ಅವರನ್ನು ಮಾಜಿ ವಿ.ಪ ಸದಸ್ಯರು, ಬಿಜೆಪಿ ನಾಯಕರು, ಕೆ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾದ ಎಸ್.ಎಲ್.ಘೋಟ್ನೇಕರ ಅವರು ಭೇಟಿಯಾಗಿ ಸನ್ಮಾನಿಸಿ, ಗೌರವಿಸಿದರು.

Banner Ad

ಈ ವೇಳೆ ಇಂದು ನಡೆದ ಜಿಲ್ಲೆಯ ಪ್ರತಿಷ್ಠಿತ ಕೆ.ಡಿ.ಸಿ.ಸಿ ಬ್ಯಾಂಕ್ ನ ಚುನಾವಣೆಯಲ್ಲಿ ಎಸ್.ಎಲ್.ಘೋಟ್ನೇಕರ ಅವರು ಸತತ 7ನೇ ಬಾರಿಗೆ ವಿಜಯ ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಕ್ಕೆ ಗೋಪಾಲ ಜೀ ಅವರು ಸಿಹಿ ತಿನಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕರಾದ ಶ್ರೀನಿವಾಸ ಘೋಟ್ನೇಕರ, ಜಿಲ್ಲಾ ವಿಶೇಷ ಆಹ್ವಾನಿತರಾದ ಅನಿಲ್ ಮುತ್ನಾಳೆ, ಪ್ರಮುಖರಾದ ವಿಜಯ ಬೋಬಾಟಿ, ಶಿವದೇವ ದೇಸಾಯಿ, ಯತಿರಾಜ್ ಶೆಟ್ಟಿ, ಮೊದಲಾದವರು ಇದ್ದರು.

Banner Ad