Banner Ad

ಸುದ್ದಿ ಕನ್ನಡ ವಾರ್ತೆ

ರಾಮನಗರದಲ್ಲಿ, ರಾಮಲಿಂಗಶ್ವರ ಜಾತ್ರೆ ವೈಭವದಿಂದ ನಡೆಯುತ್ತಿದೆ, ನಿನ್ನೆಯಿಂದ ಜಾತ್ರೆಯ ಧಾರ್ಮಿಕ ಕಾರ್ಯಕ್ರಮ ಗಳು ನಡೆಯುತ್ತಿದ್ದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಗ್ರಾಮ ಪಂಚಾಯತ್ ರಾಮನಗರ ದವರು ಉತ್ತಮ ವ್ಯವಸ್ಥೆಯನ್ನು ಮಾಡಿದ್ದು ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರು ರಾಮಲಿಂಗ ದೇವರ ದರ್ಶನ ಪಡೆದು ಪುನೀತ ರಾದರು, ಇಂದು ಭಾರಿ ಜನಸ್ತೋಮದ ನಡುವೆ ರತೋತ್ಸವ ನಡೆಯಿತು, ಹರ ಹರ ಮಹಾದೇವ ಎನ್ನುತ್ತಾ ಭಕ್ತರು ದೇವಸ್ಥಾನ ದ ಸುತ್ತಲೂ ರಥ ಎಳೆಯುವ ಮೂಲಕ ಧನ್ಯರಾದರು. ಜಾತ್ರೆಯಲ್ಲಿ ಓಡಾಡಿ ಅಲ್ಲಿರುವ ವಿವಿಧ ವಿನೋದಾವಳಿ, ಗಳನ್ನು ನೋಡಲು ಜನರು ತಂಡೋಪ ತಂಡ ವಾಗಿ ಬರುತ್ತಿದ್ದಾರೆ ರಾತ್ರಿಯ ವೇಳೆಗೆ ಇನ್ನೂ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಗೇರಿ ಭೇಟಿ . ಸಂಸದ ರಾದ ಕಾಗೇರಿ ಹೆಗಡೆ ಯವರು ಇಂದು ಮದ್ಯಾಹ್ನ 3ಘಂಟೆಗೆ ದೇವಸ್ಥಾನ ಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವಾಜಿ ಗೋಸಾವಿ, ಗಿರೀಶ್ ಗೋಸಾವಿ, ಪ್ರದೀಪ್ ದೇಸಾಯಿ,ಹಿರಿಯ ರಾದ ಮಂಗೇಶ್ ದೇಶಪಾಂಡೆ, ಕಾಮತ ಇತರರು ಇದ್ದರು

Banner Ad
Banner Ad