ಸುದ್ದಿ ಕನ್ನಡ ವಾರ್ತೆ
ಜೊಯಿಡಾ :ಸಾವಯವ ತಾಲೂಕು ಜೋಯಿಡಾ ದಲ್ಲಿ ಜೇನು ಕೃಷಿಗೆ ಉತ್ತಮ ಪರಿಸರ ವಿದೆ, ಬೆಳೆಗಳಿಗೆ ಕ್ರಿಮಿನಾಶಕ ಬಳಸದೇ ಇದ್ದಲ್ಲಿ ಉತ್ತಮ ಜೇನು ಕೃಷಿ ಮಾಡಬಹುದು ಎಂದು ಜೇನು ಕೃಷಿಕ ಗುರುರಾಜ ಹೆಗಡೆ ಹೇಳಿದರು.
ಅವರು ಜೋಯಿಡಾ ದ ನಂದಿಗದ್ದೆಯಲ್ಲಿ, ಶನಿವಾರ ಸಾವಯವ ಕೃಷಿ ಯೋಜನೆಯ (PKVY) ಅಡಿಯಲ್ಲಿ ಜೇನುಕೃಷಿ ತರಬೇತಿ, ಪ್ರಾತ್ಯಕ್ಷಿಕೆ, ಕಾರ್ಯಗಾರದಲ್ಲಿ ರೈತರಿಗೆ ಮಾಹಿತಿ ನೀಡುತ್ತಾ ಮಾತನಾಡುತ್ತಿದ್ದರು. ಜೇನು ಕೃಷಿಕ ರಾದ, ಗುರುರಾಜ ಹೆಗಡೆ ಮತ್ತು ಭಾರ್ಗವ ಹೆಗಡೆ ಅವರು ಜೇನು ಕೃಷಿ ಅಂದರೇನು, ಜೇನುಗೂಡು, ಜೇನುಹುಳ ಗಳ ವಿಧ, ಕೃತಕ ಆಹಾರ, ಗೂಡುಗಳ ಸ್ವಚ್ಛತೆ, ಮತ್ತು ಗೂಡುಗಳ ವಿಭಜನೆ ಸೇರಿದಂತೆ ಜೇನು ಕೃಷಿಯಲ್ಲಿ ಬರುವ ವಿವಿಧ, ಪ್ರಕಾರಗಳನ್ನು ಎಳೆ ಎಳೆ ಯಾಗಿ ಬಿಡಿಸಿ ಹೇಳಿದರು. ರೈತರಿಗೆ ಉಪಯುಕ್ತ ಮಾಹಿತಿ ನೀಡುತ್ತಾ ರೈತರ ಪ್ರಶ್ನೆ ಗಳಿಗೆ ಉತ್ತರಿಸಿದರು.
ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ, ಶ್ರೀ ಸೋಮೇಶ್ವರ ದೇವಸ್ಥಾನ ದ ಅಧ್ಯಕ್ಷ ಮಂಜುನಾಥ್ ಭಾಗವತ ಅವರು ಮಾತನಾಡಿ ನಾವು ತೋಟಗಾರಿಕೆ ಇಲಾಖೆಯ ಅಧಿಕಾರಿ ಗಳನ್ನು ಆಹ್ವಾನಿಸಿದ್ದೆವು ಆದರೆ ಅವರು ಸಭೆಗೆ ಬಾರದೇ ರೈತರಿಗೆ ನಿರಾಸೆ ಗೊಳಿಸಿದರು ಎಂದರು.ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್ ವಿ ದಾನಗೇರಿ ಮಾತನಾಡಿ, ಜೋಯಿಡಾ ದಲ್ಲಿ ಜೇನು ಕೃಷಿಗೆ ಉತ್ತಮ ಅವಕಾಶ ವಿದೆ, ಸಾವಯವ ತಾಲೂಕು, ಜೊತೆಗೆ ಬರಗಾಲ ಕೂಡ ಬಂದಿದೆ, ರೈತರು ಪರ್ಯಾಯ ಬೆಳೆ ಬೆಳೆಯಲು ಈಗಲೇ ದಾರಿ ಕಂಡು ಕೊಳ್ಳಬೇಕು ಪರ್ಯಾಯ ಬೆಳೆ ಬೆಳೆಯದೇ ಇದ್ದಲ್ಲಿ ಮುಂದಿನ ದಿನಗಳು ಕಷ್ಟಕರವಾಗಬಹುದು. ಉತ್ತಮ ಕಾಡಿದೆ, ನಾನೂ ಕೂಡ 40 ಜೇನು ಪೆಟ್ಟಿಗೆ ಮೂಲಕ ವರ್ಷಕ್ಕೆ ಉತ್ತಮ ಆದಾಯ ಪಡೆಯುತ್ತಿದ್ದೇನೆ, ಈ ಬಗ್ಗೆ PKVY ನ ಅಮರ ಭಾಗವತ ಮತ್ತು ಪೈ ಅವರು ಉತ್ತಮ ಪ್ರಯತ್ನ ಮಾಡಿದ್ದಾರೆ, ಎಂದರು.
ಕಾರ್ಯಕ್ರಮ ದಲ್ಲಿ ಕೃಷಿಕ ಸಮಾಜದ ಆರ್ ಆರ್ ಹೆಗಡೆ, ಗುರುರಾಜ್ ಹೆಗಡೆ, ಭಾರ್ಗವ್ ಹೆಗಡೆ, ವಿನಾಯಕ ಶಾಸ್ತ್ರಿ, ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಅಮರ ಭಾಗವತ, ವಿನಾಯಕ ಪೈ, ದಿನೇಶ ಕುಟ್ಟಿಕರ್ ನಡೆಸಿಕೊಟ್ಟರು. ಕಾರ್ಯಕ್ರಮ ದಲ್ಲಿ ನೂರಾರು ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.
