ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಎಲ್ಲರ ಸಹಕಾರ ದಿಂದ ಕಾಳಿ ಹುಲಿ ಯೋಜನೆ ಯಲ್ಲಿ ಅರಣ್ಯ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾಳಿ ಹುಲಿ ನಿರ್ದೇಶಕ ನಿಲೇಶ್ ಶಿಂದೆ ಹೇಳಿದರು .
ಅವರು 71 ನೇ ವನ್ಯ ಜೀವಿ ಸಪ್ತಾಹಕ್ಕೆ ಚಾಲನೆ ನೀಡಲು ಕ್ಯಾಸ್ಥಾಲ್ ರ್ರಾಕ್ ಗೆ ಬಂದಾಗ ಮಾಧ್ಯಮ ದವರೊಂದಿಗೆ ಮಾತ ನಾಡುತ್ತಿದ್ದರು. ಕಾಳಿ ಹುಲಿ ಯೋಜನೆಯಲ್ಲಿ ಒತ್ತಾಯದಿಂದ ನಾವು ಯಾರನ್ನೂ ಎಬ್ಬಿಸುತ್ತಿಲ್ಲ ಹೋಗುವವರು ಸ್ವ ಹಿತಾಸಕ್ತಿ ಯಿಂದ ನಮಗೆ ಅರ್ಜಿ ನೀಡಿದರೆ ನಾವು ಪರಿಶೀಲಿಸಿ ಮುಂದಿನ ಕ್ರಮ ಕೈ ಕೊಳ್ಳುತ್ತೇವೆ. ಈಗಾಗಲೇ ಸಾಕಷ್ಟು ಜನ ಇದರ ಪ್ರಯೋಜನ ಪಡೆದುಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ,ತಾಲೂಕಿನ ರಾಮನಗರದಲ್ಲೇ ಇಂತವರು ತಮ್ಮ ಕಾಲೊನಿ ಮಾಡಿಕೊoಡಿರುವುದನ್ನು ನೋಡಬಹುದು. ಕಾಡಿನ ಮದ್ಯದಲ್ಲಿ, ಯಾವುದೇ ಮೂಲಭೂತ ಸೌಲಭ್ಯ, ಪಡೆಯಲು ಸಾಧ್ಯವಿಲ್ಲದ, ಮತ್ತು, ಒಂಟಿ ಮನೆ ಇರುವವರು ಈ ಯೋಜನೆಯ ಲಾಭ ಪಡೆದು ಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದರು.
ಪತ್ರ ಕರ್ತರ ವಿವಿಧ ಪ್ರಶ್ನೆ ಗಳಿಗೆ ಉತ್ತರಿಸುತ್ತ ನಿಮ್ಮ ಉತ್ತಮ ಸಲಹೆ ಗಳಿಗೆ ಸ್ಪಂದಿಸುತ್ತೇವೆ, ಕಾಡು ಪ್ರಾಣಿ ಗಳು ಬಾಳೆ, ಅಡಿಕೆ, ತೆಂಗಿನ ಮರಗಳಿಗೆ ಹಾನಿ ಮಾಡಿದರೆ, ತೋಟಗಾರಿಕೆ ಇಲಾಖೆಯ ನಿಯಮದಂತೆ, ಪರಿಹಾರ ನೀಡುತ್ತಿದ್ದೇವೆ, ಈಗ ನಿಮ್ಮ ಸಲಹೆ ಗಮನಿಸಿ ಅಡಿಕೆ ತೆಂಗಿನಕಾಯಿ ಗಳನ್ನು, ಮಂಗ, ಕೆಂದಳಿಲು ಮುಳ್ಳು.ಹಂದಿಗಳು
ನಾಶ ಮಾಡುವುದನ್ನು ನೋಡಿ ಅವುಗಳಿಗೂ ಪರಿಹಾರ ನೀಡಬೇಕೆಂದು ಪ್ರಸ್ತಾವನೆ ತಯಾರಿಸಿ ಮೇಲಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಬೆಳೆಯುವ ಬೆಳೆಗಳಿಗೆ ಒಂದೇ ರೀತಿಯ ಮೌಲ್ಯ ಇರುವ ಕಾರಣ, ಪ್ರಸ್ತಾವನೆ ಸಲ್ಲಿಸಿದ ನಂತರ ಬರುವ ಆದೇಶ ದಂತೆ ಕ್ರಮ ಕೈ ಕೊಳ್ಳಲಾಗುವದು ಎಂದರು, ಕಾಳಿ. ಹುಲಿ ಯೋಜನೆಯನ್ನು ಜನರ ಸಹಬಾಗಿತ್ವ ದಲ್ಲಿಯೇ ನಡೆಸಿ ಕೊಂಡು ಹೋಗಲಾಗುವದು ಎಂದರು ಈ ಸಂದರ್ಭದಲ್ಲಿ ಯೋಜನೆಯ ಎಲ್ಲವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಎಲ್ಲ ವನ್ಯ ಜೀವಿ ವಲಯ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.