ಸುದ್ದಿ ಕನ್ನಡ ವಾರ್ತೆ
ತೀರ್ಥಹಳ್ಳಿ : ಪೊಲೀಸ್ ಠಾಣೆಯ ವ್ಯಾಪ್ತಿಯ ಕೋಣಂದೂರು ಗ್ರಾಮದಲ್ಲಿ ಮನೆ ಮತ್ತು ಬೈಕ್ ಕಳ್ಳತನ ಪ್ರಕರಣಗಳು ಹಾಗೂ ಕೆನರಾ ಬ್ಯಾಂಕ್ ಎ.ಟಿ.ಎಂ. ನಲ್ಲಿ ಹಣ ಕಳುವು ಪ್ರಯತ್ನ ಮಾಡಿರುವ ಸಂಬಂಧ ಪ್ರಕರಣಗಳು ದಾಖಲಾಗಿದ್ದು, ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಸೂಚನೆಯಂತೆ
ಅರವಿಂದ ಕಲಗುಂಜಿ, ಡಿವೈಎಸ್ ಪಿ ತೀರ್ಥಹಳ್ಳಿ ಉಪವಿಭಾಗ ರವರ ಸೂಚನೆಯಂತೆ ಒಂದು ವಿಶೇಷ
ತಂಡವನ್ನು ರಚಿಸಿ ಅದರಂತೆ ತೀರ್ಥಹಳ್ಳಿ ಪೊಲೀಸ್ ಠಾಣಾ ನಿರೀಕ್ಷಕರಾದbತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ರವರಾದ ಶ್ರೀಮತಿ ಸುಷ್ಮಾ ಸಿ.ಹೆಚ್.ಸಿ. ಲಿಂಗೇಗೌಡ, ಪ್ರವೀಣ್ ಕುಮಾರ್, ಸಿಪಿಸಿ ಸುರೇಶ ನಾಯ್ಕ, ಮೋಹನ್, ವಿಜಯ್ ಕುಮಾರ್ ರವರನ್ನು
ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ವಿಶೇಷ ಮಾಹಿತಿ ಆಧರಿಸಿ ಪತ್ತೆ ಹಚ್ಚಲಾಗಿ,
ಸುಮಾರು 03 ತಿಂಗಳ ಹಿಂದೆ ಕೋಣಂದೂರು ಗ್ರಾಮಕ್ಕೆ ಗಾರೆ ಕೆಲಸಕ್ಕೆ ಬಂದು ಕಳ್ಳತನಗಳನ್ನು ನಡೆಸುತ್ತಿದ್ದ
ಆರೋಪಿತನಾದ ಗಣೇಶ ತಂದೆ ಮಲ್ಲೇಶಪ್ಪ, 31 ವರ್ಷ, ಗಾರೆ ಕೆಲಸ, ಮಡಿವಾಳರ ಜನಾಂಗ, ವಾಸ
ಕೋಟೆಹಾಳ್ ಗ್ರಾಮ, ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಈತನನ್ನು ದಿನಾಂಕ: 31-07-2025
ವಶಕ್ಕೆ ಪಡೆದು ಆತನ್ನು ನೀಡಿದ ಮಾಹಿತಿಯ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ
ಪ್ರಕರಣಗಳಾದ ಹಲವು ಸೆಕ್ಷನ್ ಅಡಿಯಲ್ಲಿ ವರದಿಯಾಗಿದ್ದ 02 ಮನೆಕಳುವು ಮತ್ತು 01 ವಾಹನ ಕಳುವು ಹಾಗೂ 01 ಬ್ಯಾಂಕ್ ಎ.ಟಿ.ಎಂ. ಕಳುವು ಯತದ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಸದರಿಯವನಿಂದ 20,000/- ರೂ ಮೌಲ್ಯದ ಬೈಕ್ ಮತ್ತು ಕಳುವು ಮಾಡಲು ಬಳಸಿದ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.