ಸುದ್ಧಿಕನ್ನಡ ವಾರ್ತೆ
ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗೋವಾಕ್ಕೆ ಬಂದು ಹೋಗುವವರಿಗೆ ಇದೊ ಶಾಕಿಂಗ್ ನ್ಯೂಸ್… ಹೌದು ನೀವು ಗೋವಾಕ್ಕೆ ಬಂದು ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಊಟ ಮಾಡಿದರೆ (If you cook and eat on the road side) ಜೈಲೂಟ ಗ್ಯಾರಂಟಿ. ಇದ್ಯಾಕೆ ಹೀಗೆ ಅಂತೀರಾ…ಈ ಸುದ್ಧಿ ಪೂರ್ತಿ ಓದಿ…
ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣ. (The state of Goa is a world famous tourist destination) ಗೋವಾ ರಾಜ್ಯಕ್ಕೆ ನೆರೆಯ ರಾಜ್ಯಗಳಿಂದ ಮಾತ್ರವಲ್ಲದೆಯೇ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಗೋವಾ ರಾಜ್ಯಕ್ಕೆ ಬರುವ ಪ್ರವಾಸಿಗರು ರಸ್ತೆ ಬದಿಯಲ್ಲಿ ಅಡುಗೆ ಬೇಯಿಸಿ ಅಲ್ಲಿಯೇ ಊಟ ಮಾಡಿದರೆ ಶಿಕ್ಷೆಗೆ ಗುರಿಯಾಗುವುದು ಪಕ್ಕಾ. ಇಂತಹ ಕಟ್ಟು ನಿಟ್ಟಿನ ಕ್ರಮ ಗೋವಾ ರಾಜ್ಯದಲ್ಲಿ ಜಾರಿಯಲ್ಲಿದೆ.
ಗೋವಾ ರಾಜ್ಯಕ್ಕೆ ನೆರೆಯ ರಾಜ್ಯ ಕರ್ನಾಟಕದಿಂದ ಸ್ವಂತ ವಾಹನದಲ್ಲಿ ಹಲವು ಪ್ರವಾಸಿಗರು ಅಡಿಗೆ ಸಾಮಗ್ರಿಯನ್ನು ತೆಗೆದುಕೊಂಡು ಗೋವಾಕ್ಕೆ ಬಂದು ಇಲ್ಲಿ ರಸ್ತೆಯ ಪಕ್ಕದಲ್ಲಿ ಅಡಿಗೆ ಬೇಯಿಸಿ ಊಟ ಮಾಡಿ ಇಲ್ಲಿ ಪ್ರವಾಸಿ ತಾಣಗಳಲ್ಲಿ ಓಡಾಡಿ ಕರ್ನಾಟಕಕ್ಕೆ ವಾಪಸ್ಸಾಗುತ್ತಿದ್ದರು. ಈ ಹಿಂದೆಯೂ ಕೂಡ ಈ ರೀತಿ ರಸ್ತೆ ಬದಿಯಲ್ಲಿ ಅಡುಗೆ ಬೇಯಿಸಿದ ಹಲವರು ಪೋಲಿಸ್ ಠಾಣೆಯ ಮೆಟ್ಟಿಲೇರಿ ಹೆಚ್ಚಿನ ದಂಡ ತೆತ್ತು ಹೋಗಿರುವ ಉದಾಹರಣೆ ಇದೆ. ಇದೀಗ ಗೋವಾ ಸರ್ಕಾರ ನಿಯಮ ಇನ್ನೂ ಕಠಿಣಗೊಳಿಸಿದೆ. (The Goa government has made the rules even stricter) ಗೋವಾಕ್ಕೆ ಪ್ರವಾಸಿಗರ ವಾಹನಗಳು ಬರುವಾಗ ಗಡಿಯಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತದೆ. ವಾಹನಗಳಲ್ಲಿ ಅಡುಗೆ ಸಾಮಗ್ರಿಗಳು ಕಂಡುಬಂದಲ್ಲಿ ಅಲ್ಲಿಯೇ ಗೋವಾ ಪೋಲಿಸರು ಆ ವಸ್ತುಗಳನ್ನು ಜಫ್ತಿ ಮಾಡಿ ಕ್ರಮ ಜರುಗಿಸಲಿದ್ದಾರೆ. ಇಂತಹ ಕಠಿಣ ನಿಯಮವನ್ನು ಗೋವಾ ಸರ್ಕಾರ ಇತ್ತೀಚೆಗಷ್ಟೇ ಜಾರಿಗೆ ತಂದಿದೆ.
ಹೇಳಿ ಕೇಳಿ ಗೋವಾ ತುಟ್ಟಿ ರಾಜ್ಯ. ಇದರಿಂದಾಗಿ ನೆರೆಯ ರಾಜ್ಯಗಳಿಂದ ಗೋವಾಕ್ಕೆ ಸ್ವಂತ ವಾಹನಗಳಲ್ಲಿ ಬರುವ ಪ್ರವಾಸಿಗರು ಅಡುಗೆ ವಸ್ತುಗಳನ್ನು ತೆಗೆದುಕೊಂಡುಇ ಬಂದು ಇಲ್ಲಿ ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಊಟ ಮಾಡಿ ಹೋಗ್ತಿದ್ರು. ಇನ್ನು ಮುಂದೆ ಹಾಗಾಗೊಲ್ಲ. ಕಠಿಣ ನಿಯಮ ಗೋವಾದಲ್ಲಿ ಜಾರಿಯಲ್ಲಿದೆ.
ಗೋವಾ ರಾಜ್ಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ (CM Pramod Savant) ರವರು ಇತ್ತೀಚೆಗಷ್ಟೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಪ್ರವಾಸಿಗರು ವಾಹನದಲ್ಲಿ ಗೋವಾ ಗಡಿ ಪ್ರವೇಶಿಸುವಾಗ ಅವರ ಬಳಿ ಗ್ಯಾಸ್ ಸಿಲಿಂಡರ್,ಸ್ಟೊವ್, ಪ್ರಾತ್ರೆ ಕಂಡುಬಂದಲ್ಲಿ ಅವುಗಳನ್ನು ಜಫ್ತಿ ಮಾಡಿ ದಂಡ ವಿಧಿಸುವಂತೆ ಪೋಲಿಸ್ ಇಲಾಖೆಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಇದರಿಂದಾಗಿ ಪ್ರವಾಸಿಗರು ದಂಡ ವಿಧಿಸಿದ ನಂತರವೂ ಈ ವಸ್ತುಗಳನ್ನು ಪೋಲಿಸರು ವಾಪಸ್ಸು ನೀಡುವುದಿಲ್ಲ.
ಕರ್ನಾಟಕದಿಂದ ಗೋವಾಕ್ಕೆ ಬಂದು ರಸ್ತೆಯ ಪಕ್ಕದಲ್ಲಿ ಅಡುಗೆ ಮಾಡುವಾಗ ಸ್ಥಳೀಯರು ಬಂದು ಗಲಾಟೆ ಮಾಡಿ ಪ್ರಕರಣ ಪೋಲಿಸ್ ಠಾಣೆಯ ಮೆಟ್ಟಿಲೇರಿದ ಅದೆಷ್ಟೋ ಉದಾಹರಣೆಗಳಿವೆ. ಇದರಿಂದಾಗಿ ಕರ್ನಾಟಕದಿಂದ ಗೋವಾಕ್ಕೆ ಬರುವ ಪ್ರವಾಸಿಗರು, ಅಥವಾ ಇನ್ಯಾವುದೇ ರಾಜ್ಯದಿಂದ ಬರುವ ಪ್ರವಾಸಿಗರು ಈ ನಿಯಮಗಳನ್ನು ಪಾಲಿಸುವುದು ಸೂಕ್ತ. ಇಲ್ಲವಾದಲ್ಲಿ ಹೆಚ್ಚಿನ ದಂಡ ತೆರವುದು ಮಾತ್ರವಲ್ಲದೆಯೇ ಶಿಕ್ಷೆಗೂ ಗುರಿಯಾಗುವುದು ನಿಶ್ಚಿತ.