Banner Ad

ಸುದ್ದಿಕನ್ನಡ ವಾರ್ತೆ
ನವದೆಹಲಿ: ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರಣಗಳನ್ನು ನೀಡಿರುವ ಏರ್ ಇಂಡಿಯಾ ( Air India )ವಿಮಾನ ಕಂಪನಿ ಶುಕ್ರವಾರ ಕನಿಷ್ಠ ಎಂಟು ಅಂತರರಾಷ್ಟ್ರೀಯ ಹಾಗೂ ದೇಶೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.

 

Banner Ad

ಜೂನ್ 12 ರಂದು 270 ಜನರ ಸಾವಿಗೆ ಕಾರಣವಾದ ಡ್ರೀಮ್ಲೈನರ್ನ ವಿಮಾನ ಅಪಘಾತದ ನಂತರ ನಿಯಂತ್ರಕ ಪರಿಶೀಲನೆ ಮತ್ತು ನಡೆಯುತ್ತಿರುವ ಸುರಕ್ಷತಾ ಪರಿಶೀಲನೆಗಳ ಹಿನ್ನೆಲೆಯಲ್ಲಿ ಈ ವಿಮಾನಗಳ ಹಾರಾಟ ರದ್ದಾಗಿದೆ ಎನ್ನಲಾಗಿದೆ.

 

ಅಂತರರಾಷ್ಟ್ರೀಯ ವಿಮಾನಗಳಾದ

ಎಐ906 (ದುಬೈ-ಚೆನ್ನೈ)

AI308 (ದೆಹಲಿ-ಮೆಲ್ಬೋರ್ನ್)

AI309 (ಮೆಲ್ಬೋರ್ನ್-ದೆಹಲಿ)

AI2204 (ದುಬೈ-ಹೈದರಾಬಾದ್)

ದೇಶೀಯ ವಿಮಾನಗಳಾದ

AI874 (ಪುಣೆ-ದೆಹಲಿಗೆ)

AI456 (ಅಹಮದಾಬಾದ್-ದೆಹಲಿಗೆ)

AI2872 (ಹೈದರಾಬಾದ್-ಮುಂಬೈಗೆ)

AI571 (ಚೆನ್ನೈ-ಮುಂಬೈಗೆ)

ಈ ವಿಮಾನಗಳ ಹಾರಾಟ ರದ್ದುಗೊಂಡಿವೆ. ತೊಂದರೆಗೊಳಗಾದ ಪ್ರಯಾಣಿಕರಲ್ಲಿ ಏರ್ ಇಂಡಿಯಾ ಕ್ಷಮೆಯಾಚಿಸಿದ್ದು, ವಿಮಾನಗಳು, ಉಚಿತ ಮರು-ವೇಳಾಪಟ್ಟಿ ಮತ್ತು ಪೂರ್ಣ ಮರುಪಾವತಿಯಂತಹ ಆಯ್ಕೆಗಳನ್ನು ಒದಗಿಸುತ್ತಿದೆ ಎಂದು ಹೇಳಿದೆ.

ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಅರಿಯಲು ತಮ್ಮ ವೆಬ್‍ಸೈಟ್‍ನಲ್ಲಿ ಪರಿಶೀಲಿಸಬಹುದು ಅಥವಾ 011 69329333, 011 69329999 ಈ ಗ್ರಾಹಕ ಸೇವಾ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದೆ.

 

Banner Ad