ಸುದ್ದಿ ಕನ್ನಡ ವಾರ್ತೆ

ಭಟ್ಕಳ: ತಾಲೂಕಿನ ಜಾಲಿ ಕೋಡಿ ಸಮುದ್ರ ತೀರದಲ್ಲಿ ಕಂಟೈನರ್ ಬೋಟ್ ಒಂದು ತೇಲಿಕೊಂಡು ಬಂದು ಸಿಲುಕಿ ಹಾಕಿಕೊಂಡಿದ್ದು, ಎಲ್ಲಿಂದ ಬಂತು, ಹೇಗೆ ಪ್ರತ್ಯೇಕವಾಗಿ ಬಂತು ಎನ್ನುವ ಕುರಿತು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಸ್ಥಳೀಯರು ಹೇಳುವ ಪ್ರಕಾರ ಬೆಳಗಿನ ಜಾವ ೨ ಗಂಟೆಯ ಸುಮಾರಿಗೆ ಬೃಹತ್ ಗಾತ್ರದ (೩೦ ಮೀಟರ್‌ಗೂ ಹೆಚ್ಚು ಉದ್ದ, ೮ ಮೀಟರ್‌ನಷ್ಟು ಅಗಲ) ಈ ಕಂಟೈನರ್ ಸಮುದ್ರದಲ್ಲಿ ತೇಲಿಕೊಂಡು ಬಂದು ಜಾಲಿ ಕೋಡಿ ಸಮುದ್ರದ ದಡದಲ್ಲಿ ಸಿಲುಕಿ ಹಾಕಿಕೊಂಡಿದೆ. ಜಾಲಿ ಕೋಡಿಯ ತೀರದಲ್ಲಿರುವ ಬಂಡೆಗಲ್ಲಿನಿAದ ಒಳಕ್ಕೆ ಬಂದ ಕಾರಣ ಇಲ್ಲಿಂದ ಮುಂದಕ್ಕೆ ತೇಲಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಸಂಪೂರ್ನ ಕಂಟೈನರ್‌ನ್ನು ಆಂಕರ್ ಹಾಕಿ ನಿಲ್ಲಿಸಿದ ರೀತಿಯಲ್ಲಿ ನಿಂತು ಕೊಂಡಿದ್ದು ಎಲ್ಲಿಯೂ ಇದಕ್ಕೆ ಹಾನಿಯಾದ ಬಗ್ಗೆ ಕಂಡು ಬರುತ್ತಿಲ್ಲ. ಇದು ಯಾವುದೇ ಶಿಪ್‌ನಿಂದ ಪ್ರತ್ಯೇಕಗೊಂಡು ಸಮುದ್ರದಲ್ಲಿ ತೇಲಿ ಬಂದಿರಬೇಕು ಎಂದು ಅಂದಾಜಿಸಲಾಗಿದ್ದು ನಿಖರ ಕಾರಣ ಮಾತ್ರ ಇನ್ನಷ್ಟೇ ತಿಳಿದು ಬರಬೇಕಿದೆ. ಕಂಟೇನರ್ ಕೊಚಿನ್ ಶಿಪ್‌ಯಾರ್ಡ ಎನ್ನುವ ನಾಮ ಫಲಕ ಹೊಂದಿದು ಇದು ಕೇರಳದಿಂದ ಬೇರೆ ದೇಶಕ್ಕೆ ಸಾಗಾಟ ಮಾಡುತ್ತಿರುವಾಗ ಹಡಗಿನಿಂದ ಬೇರ್ಪಟ್ಟು ಬಂದಿರುವ ಶಂಕೆ ಬಲವಾಗಿದೆ.

ನೋಡಲು ಸಮುದ್ರ ತೀರಕ್ಕೆ ಜನ: ಜಾಲಿ ಕೋಡಿ ಸಮುದ್ರ ತೀರಕ್ಕೆ ಕಂಟೈನರ್ ತೇಲಿ ಬಂದು ನಿಂತಿದ್ದನ್ನು ನೋಡಲು ನೂರಾರು ಜನರು ಜಾಲಿ ಕೋಡಿ ಸಮುದ್ರ ತೀರಕ್ಕೆ ಬರುತ್ತಿದ್ದು ಊರಿನಲ್ಲಿ ಎಲ್ಲಾ ಇದರದ್ದೇ ಸುದ್ದಿಯಾಗಿದೆ. ಕರಾವಳಿ ಕಾವಲು ಪಡೆಯ ಪೊಲೀಸ್‌ರು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೂರದಲ್ಲಿ ನಿಂತಿರುವ ಹಡಗು: ಮೀನುಗಾರರು ಹೇಳುವ ಪ್ರಕಾರ ಸಮುದ್ರದಲ್ಲಿ ಒಂದು ದೊಡ್ಡ ಹಡಗು ನಿಂತಿದ್ದು ಈ ಕಂಟೈನರ್ ಜೊತೆಗೆ ಬಂದಿದೆಯೇ ಎನ್ನುವ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇಲ್ಲದೇ ಈ ಕಂಟೈನರ್‌ನ್ನು ದೊಡ್ಡ ಹಡಗಿಗೆ ಕಟ್ಟಿ ಸಾಗಿಸುತ್ತಿರುªಗ ಇದು ಬೇರ್ಪಟ್ಟಿದೆಯೇ ಎನ್ನುವ ಕುರಿತು ಮಾತನಾಡಿಕೊಳ್ಳುತ್ತಿದ್ಧಾರೆ. ಒಟ್ಟಾರೆ ದೂರದಲ್ಲಿ ಇನ್ನೊಂದು ಹಡಗು ಕಾಣಿಸುತ್ತಿದ್ದು ಈ ಘಟನೆಗೂ ಅದಕ್ಕೂ ಸಂಬAಧವಿದೆಯೇ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಆದರೆ ಆ ಹಡಗು ಸಂಚರಿಸದೇ ನಿಂತಲ್ಲಿಯೇ ನಿಂತಿರುವ ಕಾರಣ ಇದಕ್ಕೆ ಸಂಬAಧ ಪಟ್ಟ ಹಡಗು ಎನ್ನುವ ಕುರಿತು ಇರುವ ಸಂಶಯ ಬಲವಾಗಿದೆ.

ಭಟ್ಕಳ: ತಾಲೂಕಿನ ಜಾಲಿ ಕೋಡಿ ಸಮುದ್ರ ತೀರದಲ್ಲಿ ಕಂಟೈನರ್ ಬೋಟ್ ಒಂದು ತೇಲಿಕೊಂಡು ಬಂದು ಸಿಲುಕಿ ಹಾಕಿಕೊಂಡಿದ್ದು, ಎಲ್ಲಿಂದ ಬಂತು, ಹೇಗೆ ಪ್ರತ್ಯೇಕವಾಗಿ ಬಂತು ಎನ್ನುವ ಕುರಿತು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಬೆಳಗಿನ ಜಾವ ೨ ಗಂಟೆಯ ಸುಮಾರಿಗೆ ಬೃಹತ್ ಗಾತ್ರದ (೩೦ ಮೀಟರ್‌ಗೂ ಹೆಚ್ಚು ಉದ್ದ, ೮ ಮೀಟರ್‌ನಷ್ಟು ಅಗಲ) ಈ ಕಂಟೈನರ್ ಸಮುದ್ರದಲ್ಲಿ ತೇಲಿಕೊಂಡು ಬಂದು ಜಾಲಿ ಕೋಡಿ ಸಮುದ್ರದ ದಡದಲ್ಲಿ ಸಿಲುಕಿ ಹಾಕಿಕೊಂಡಿದೆ. ಜಾಲಿ ಕೋಡಿಯ ತೀರದಲ್ಲಿರುವ ಬಂಡೆಗಲ್ಲಿನಿAದ ಒಳಕ್ಕೆ ಬಂದ ಕಾರಣ ಇಲ್ಲಿಂದ ಮುಂದಕ್ಕೆ ತೇಲಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಸಂಪೂರ್ನ ಕಂಟೈನರ್‌ನ್ನು ಆಂಕರ್ ಹಾಕಿ ನಿಲ್ಲಿಸಿದ ರೀತಿಯಲ್ಲಿ ನಿಂತು ಕೊಂಡಿದ್ದು ಎಲ್ಲಿಯೂ ಇದಕ್ಕೆ ಹಾನಿಯಾದ ಬಗ್ಗೆ ಕಂಡು ಬರುತ್ತಿಲ್ಲ. ಇದು ಯಾವುದೇ ಶಿಪ್‌ನಿಂದ ಪ್ರತ್ಯೇಕಗೊಂಡು ಸಮುದ್ರದಲ್ಲಿ ತೇಲಿ ಬಂದಿರಬೇಕು ಎಂದು ಅಂದಾಜಿಸಲಾಗಿದ್ದು ನಿಖರ ಕಾರಣ ಮಾತ್ರ ಇನ್ನಷ್ಟೇ ತಿಳಿದು ಬರಬೇಕಿದೆ. ಕಂಟೇನರ್ ಕೊಚಿನ್ ಶಿಪ್‌ಯಾರ್ಡ ಎನ್ನುವ ನಾಮ ಫಲಕ ಹೊಂದಿದು ಇದು ಕೇರಳದಿಂದ ಬೇರೆ ದೇಶಕ್ಕೆ ಸಾಗಾಟ ಮಾಡುತ್ತಿರುವಾಗ ಹಡಗಿನಿಂದ ಬೇರ್ಪಟ್ಟು ಬಂದಿರುವ ಶಂಕೆ ಬಲವಾಗಿದೆ.