ಸುದ್ದಿಕನ್ನಡ ವಾರ್ತೆ
Goa : ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಚಂಡಮಾರುತದ ಭೀತಿ ಎದುರಾಗಿದೆ. ಇದರಿಂದಾಗಿ ಗೋವಾ ರಾಜ್ಯದ ಪಾರಂಪರಿಕ ಮೀನುಗಾರರು ಮೀನುಗಾರಿಕೆ ನಿರ್ಬಂಧ ಆರಂಭಗೊಳ್ಳುವ ಮುನ್ನವೇ ಮೀನುಗಾರಿಕೆ ನಿರ್ಬಂಧ ಪರಿಸ್ಥಿತಿ ಎದುರಾಗಿವಂತಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್ ಗಳು ಹಂತ ಹಂತವಾಗಿ ದಡ ಸೇರಲು ಆರಂಭಿಸಿವೆ.

ಪ್ರತಿ ವರ್ಷ ಜೂನ್ 1 ರಿಂದ ಜುಲೈ 31 ರ ವರೆಗೆ 61 ದಿನಗಳ ಕಾಲ ಮಳೆಗಾಲದ ಸಂದರ್ಭದಲ್ಲಿ ರಾಜ್ಯದಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. ಗೋವಾ ಸಾಗರಿ ಮೀನುಗಾರಿಕೆ ನಿಯಮ 1980 ರ ಕಲಂ 4 ಉಪಕಲಂ 1 ಮತ್ತು 2 ರ ಅಡಿಯಲ್ಲಿ ಈ ನಿರ್ಬಂಧ ಹೇರಲಾಗುತ್ತದೆ. ಆದರೆ ಪ್ರಸಕ್ತ ವರ್ಷ ಇದೀಗ ರಾಜ್ಯದಲ್ಲಿ ಗಾಳಿ ಮಳೆ ಆರಂಭಗೊಂಡಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾತುತದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಆರಂಭಗೊಳ್ಳುವ ಮುನ್ನವೇ ಮೀನುಗಾರರು ದಡ ಸೇರುವಂತಾಗಿದೆ.