ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ : ಕನ್ನಡ ಎಂದರೆ ಕನ್ನಡ ರಾಜ್ಯೋತ್ಸವದ ದಿನ ನೆನಪಾಗುವ ಈ ಸಂದರ್ಭದಲ್ಲಿ ಪ್ರತಿದಿನ ಪ್ರತಿಕ್ಷಣ ಕನ್ನಡದ ಕಗ್ಗೊಲೆಯನ್ನು ಸರ್ಕಾರಿ ಇಲಾಖೆಯ ಅಧಿಕಾರಿಗಳೆ ಮಾಡುತ್ತಿರುವುದು ಒಂದೆಡೆಯಾದರೆ ಇಲಾಖೆಯಲ್ಲೇ ಕನ್ನಡ ಮಾತನಾಡುವವರ ಸಂಖ್ಯೆ ಇಲ್ಲದಂತ ಪರಿಸ್ಥಿತಿಯಾಗಿದೆ.

ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಮತ್ಸ್ಯಧಾಮವಾಗಿರುವ ಚಿಬ್ಬಲಗುಡ್ಡೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸುತ್ತ ಮುತ್ತ ಶಿವಮೊಗ್ಗದ ನಿರ್ಮಿತಿ ಕೇಂದ್ರದ ವತಿಯಿಂದ 50 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿಯಾಗುತ್ತಿದ್ದು ಕಾಮಗಾರಿಯ ವೆಚ್ಚವನ್ನು ತಿಳಿಸುವ ಸಲುವಾಗಿ ಫ್ಲೆಕ್ಸ್ ಹಾಕಲಾಗಿದ್ದು ಅದನ್ನ ಓದಿದ ಪ್ರವಾಸಿಗರು ಸರ್ಕಾರಿ ಇಲಾಖೆಯ ಅಧಿಕಾರಿಗಳು ಕನ್ನಡದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತುಂಗಾನದಿಯನ್ನು (ತುಂದಾನದಿ ) ಎಂದು, ಮತ್ಸ್ಯಧಾಮವನ್ನು ( ಮತ್ಸಧಾಮ ) ಎಂದು
ಪ್ಲಾಟ್ ಫಾರ್ಮ್ ( ಪ್ಲಾಟ್ಪರ್ಮ ) ಎಂದು ಹಾಕಿರುವುದನ್ನು ನೋಡಿ ಅಲ್ಲಿಗೆ ಬರುವ ಪ್ರವಾಸಿಗರು ತಮ್ಮ ಮಕ್ಕಳಿಗೆ ತೋರಿಸಿ ನಗುತ್ತಿದ್ದಾರೆ. ಪವಿತ್ರವಾದ ತುಂಗಾ ನದಿಗೆ ಹೊಸ ಹೆಸರು ನಾಮಕರಣ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ದೇವಸ್ಥಾನದ ಎದುರು ನಿರ್ಮಿಸಿರುವ ತಡೆಗೋಡೆಗೆ ಮೂರು ಮತ್ತೊಂದು ರಾಡ್ ಹಾಕಿ ನಿರ್ಮಿಸಿ ಕಳಪೆ ಕಾಮಗಾರಿ ಮಾಡಿದ್ದರಿಂದ ತಡಗೋಡೆ ತುಂಡು ತುಂಡಾಗಿ ದೇವಸ್ಥಾನದ ಎದುರು ಬಂದು ಕುಳಿತಿದೆ. ತುಂಡು ತುಂಡಾಗಿ ಬಿದ್ದ ಕಬ್ಬಿಣದ ಅವಶೇಷ ಗಳನ್ನು ಗಮನಿಸಿದ ಪ್ರವಾಸಿಗರು ಅಭಿವೃದ್ಧಿ ಹೆಸರಲ್ಲಿ ಸರ್ಕಾರದ ಹಣವನ್ನು ಗೋಲ್ ಮಾಲ್ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.