ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡುಪ್ರಾಣಿಗಳು ಕೃಷಿಕರ ಜಮೀನಿಗೆ ನುಗ್ಗಿ ಹಾನಿ ಮಾಡುತ್ತಿರುವುದು ಕೃಷಿಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ತಾಲೂಕಿನ ಕೊಡ್ಲಗದ್ದೆ ಭಾಗದಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿದೆ. ಗುಡ್ಡದ ಕಾಡಿನ ಭಾಗದಿಂದ ತೋಟಕ್ಕೆ ಬಂದು ಹಂದಿಗಳ ಹಿಂಡು ಹೆಚ್ಚಿನ ಹಾನಿ ಮಾಡುತ್ತಿವೆ. ಕಾಡು ಹಂದಿಗಳ ಹಿಂಡು ಕೃಷಿ ಜಮೀನಿಗೆ ನುಗ್ಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅನಂತ್ ನರಸಿಂಹ ಹೆಗಡೆ ಬಾಳೆಹಾಡ ಕೊಡ್ಲಗದ್ದೆ ಇವರ ಕಾರಿಗೆ ಹಂದಿಗಳ ಹಿಂಡು ಅಡ್ಡ ವಾಗಿ ಬಂದಿದ್ದು ಈ ದೃಶ್ಯವನ್ನು ಅವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಕೃಷಿಕರಿಗೆ ತೊಂದರೆ..
ಕಾಡು ಹಂದಿಗಳ ಉಪಟಳ ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಕೃಷಿಕರಾದ ವಿ.ಕೆ ಭಟ್ ಕೊಡ್ಲ ಗದ್ದೆ ರವರು ಆಗ್ರಹಿಸಿದ್ದಾರೆ.