ಪಣಜಿ: ಮುಂದಿನ 15 ದಿನಗಳಲ್ಲಿ ಪಣಜಿ ಸಮೀಪದ ರಾಯಬಂದರ್ ಪ್ರದೇಶದ ರಸ್ತೆಗಳನ್ನು ಸ್ಮಾರ್ಟ್ ಸಿಟಿ ಆಡಳಿತದಿಂದ ಸರಿಪಡಿಸಲಾಗುವುದು ಎಂದು ಬಾಂಬೆ ಹೈಕೋರ್ಟ್‍ನ ಗೋವಾ ಪೀಠ ತಿಳಿಸಿದೆ.

ಸ್ಮಾರ್ಟ್ ಸಿಟಿ ಆಡಳಿತದಿಂದ 11 ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು. ಇದು ರಾಯಬಂದರ್ ಪ್ರದೇಶದ ರಸ್ತೆಗಳ ದುರಸ್ತಿ ಒಳಗೊಂಡಿದೆ. ರಾಯಬಂದರ್ ಪ್ರದೇಶದ ರಸ್ತೆ ದುರಸ್ತಿಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಸ್ಮಾರ್ಟ್ ಸಿಟಿ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ತಿಳಿಸಲಾಗಿದೆ.

ಪಣಜಿ ಮುನ್ಸಿಪಲ್ ಕಾರ್ಪೊರೇಷನ್ ಪೊಲೀಸ್ ಪ್ರಧಾನ ಕಚೇರಿಯ ಮುಂಭಾಗದ ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ಪಣಜಿ ಮುನ್ಸಿಪಲ್ ಕಾರ್ಪೊರೇಷನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಅಲ್ಲದೆ ಇನ್ನೆರಡು ರಸ್ತೆಗಳ ಕಾಮಗಾರಿಯನ್ನು ಮುಂದಿನ ವಾರ ತಿಳಿಸಲಾಗುವುದು.
ಅಲ್ಟಿನೊದ ಜೋಗರ್ಸ್ ಪಾರ್ಕ್ ಬಳಿಯ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸುತ್ತಿದೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ನ್ಯಾಯಾಲಯಕ್ಕೆ ಅಡ್ವೊಕೇಟ್ ಜನರಲ್ ಅಡ್ವ. ದೇವಿದಾಸ್ ಪಾಂಗಮ್ ಮಾಹಿತಿ ಒದಗಿಸಿದ್ದಾರೆ.