ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಕನ್ನಡ ಮಾಧ್ಯಮ ಶಾಲೆಗಳು( Kannada Medium School) ಹಲವೆಡೆ ಮುಚ್ಚುವ ಹಂತದಲ್ಲಿರುವ ಸಂದರ್ಭದಲ್ಲಿ ಕನ್ನಡ ಶಾಲೆಯನ್ನು ತಮ್ಮ ದೇಗುಲವೆಂದು ಪೂಜಿಸುತ್ತ, ಊರಜನರೆಲ್ಲ ಸಹಾಯ ಸಹಕಾರ ನೀಡಿ ಪ್ರತಿ ವರ್ಷ ಗಣರಾಜ್ಯೋತ್ಸವ ದಿನವನ್ನು ಹಬ್ಬದಂತೆ ಆಚರಿಸುತ್ತ ಬಂದಿರುವುದು ಮಾತ್ರವಲ್ಲದೆಯೇ ಈ ಕಾರ್ಯಕ್ರಮಕ್ಕಾಗಿ ಗ್ರಾಮೀಣ ಭಾಗದಲ್ಲಿರುವ ಈ ಶಾಲೆಯನ್ನು ಮದುವೆ ಮನೆಯಂತೆ ಸಿಂಗರಿಸಿ ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಆಚರಿಸುತ್ತಿರುವುದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೇ ಮಾದರಿಯಾಗಿದೆ. ಹೌದು ಇದು ಯಾವ ಶಾಲೆ ಎಂದು ಬಲ್ಲಿರಾ..? ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ದೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. (Government Higher Primary School, Dehalli, Yallapur Taluk, Uttara Kannada District.)
ಹೌದು ಪ್ರತಿ ವರ್ಷದಂತೆಯೇ ಪ್ರಸಕ್ತ ಜನವರಿ 26 ರಂದು ದೇಹಳ್ಳಿಯ ಈ ಶಾಲೆಯಲ್ಲಿ 12 ನೇಯ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ “ಸಾಂಸ್ಕøತಿಕ ಸೌರಭ-2025” ಕಾರ್ಯಕ್ರಮವನ್ನು ಅಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಿ ಸುಂದರವಾಗಿ ಸಿಂಗರಿಸಿ ದೇವಸ್ಥಾನದಂತೆಯೇ ಊರ ನಜರೆಲ್ಲ ಒಗ್ಗಟ್ಟಾಗಿ ಎಲ್ಲಾ ಕಾರ್ಯಕ್ರಮ ಆಯೋಜಿಸುತ್ತಾ ಬಂದಿರುವುದು ಎಲ್ಲರಿಗೂ ಮಾದರಿಯಾಗಿದೆ.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮೀತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇಹಳ್ಳಿ, ಅಂಗನವಾಡಿ ಕೇಂದ್ರ ಹಾಗೂ ಹಳೇ ವಿದ್ಯಾರ್ಥಿಗಳ ಸಮಘ ದೇಹಳ್ಳಿ, ಗ್ರಾಮ ಪಂಚಾಯತ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ದೇಹಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪ್ರಾ.ಕೃ.ಪತ್ತಿನ ಸಹಕಾರಿ ಸಂಘ ದೇಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
76 ನೇಯ ಗಣರಾಜ್ಯೋತ್ಸವದ ಪ್ರಯುಕ್ತ (76th Republic Day) ಸರ್ಕಾರಿ ಕಛೇರಿಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಶಾಲಾ ಸಂತೆ ಸ್ಫರ್ಧಾ ಕಾರ್ಯಕ್ರಮ, ದೇಹಳ್ಳಿ ಮತ್ತು ಹಿರಿಯಾಳ ಗ್ರಾಮದ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಕ್ರೀಡಾ ಸ್ಫರ್ಧೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ದೇಹಳ್ಳಿಯ ವೈದ್ಯಾಧಿಕಾರಿಗಳು ಮತ್ತು ತಂಡವರಿಂದ ವಿಶೇಷ ಆರೋಗ್ಯ ಶಿಭಿರ, ದೇಹಳ್ಳಿ ಮತ್ತು ಹಿರಿಯಾಳ ಗ್ರಾಮದ ಸಂಘ ಸಂಸ್ಥೆಗಳು ಮತ್ತು ಯುವಕ ಮಂಡಳದ ವತಿಯಿಂದ ಸ್ವಚ್ಛ ಗ್ರಾಮ ಸ್ವಾಸ್ಥ್ಯ ಗ್ರಾಮ ಕಾರ್ಯಕ್ರಮ, ಈ ವರ್ಷದ ನಾಗರೀಕ ಸನ್ಮಾನ-ಪ್ರತಿಭಾ ಪುರಸ್ಕಾರ-ಅಭಿನಂದನಾ ಪತ್ರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ., ಪ್ರಾರ್ಥನಾ ನೃತ್ಯ,ಕಥಾ ರೂಪಕ ನೃತ್ಯ, ಕಂಸಾಳೆ ನೃತ್ಯ, ಯೋಗ ನೃತ್ಯ, ರಾಷ್ಟ್ರೀಯ ಭಾವೈಕ್ಯತೆ ನೃತ್ಯ, ಭಕ್ತಿಪ್ರಧಾನ ನೃತ್ಯ, ಚಲನಚಿತ್ರ ನೃತ್ಯ, ಅಭಿನಯ ಗೀತೆ ನೃತ್ಯ, ದೇಶಪ್ರೇಮ ನೃತ್ಯ, ಜಾನಪದ ನೃತ್ಯ, ಭರತನಾಟ್ಯ ನೃತ್ಯ, ಹೀಗೆ ಹತ್ತು ಹಲವಾರಿ ವಿವಿಧ ನೃತ್ಯದೊಂದಿಗೆ ಕಿರು ಹಾಸ್ಯ, ಕರೋಕೆ ಹಾಡುಗಳು, ಕಿರು ನಾಟಕ, ಏಕಪಾತ್ರಾಭಿನಯ, ಮತ್ತು ಕಲಿಕೆ ಪೂರಕ ಸಂದೇಶಗಳ ವಿವಿಧ ಕಾರ್ಯಕ್ರಮಗಳ ಪ್ರದರ್ಶನ ಆಯೋಜಿಸಲಾಗಿದೆ.
ದೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಅಚ್ಚುಕಟ್ಟುತನ ಮತ್ತು ಸ್ವಚ್ಛತೆಯಂತೂ ಇನ್ನೂ ವಿಶೇಷ. ಇಂತಹ ಒಂದು ಜ್ಞಾನ ದೇಗುಲದ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಕಾರ್ಯಕ್ರಮಗಳನ್ನು ವೀಕ್ಷಿಸಿ.