ಸುದ್ಧಿಕನ್ನಡ ವಾರ್ತೆ
Goa: ನೀವು ಮನೆಯಲ್ಲಿ ನಾಯಿ ಸಾಕುತ್ತಿದ್ದೀರಾ..? ಹಾಗಿದ್ದರೆ ಪಶುಸಂವರ್ಧನ ಖಾತೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಖಡ್ಡಾಯವಾಗಿದೆ.

ನಿಮ್ಮ ಸಾಕು ನಾಯಿಯ ನೋಂದಣಿ ಮಾಡಿಕೊಳ್ಳದಿರುವುದು ಕಂಡುಬಂದರೆ ಸಂಬಂಧಿತ ಮಾಲೀಕರಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಈ ಕುರಿತ ಮಾಹಿತಯನ್ನು ಪಶುಸಂಗೋಪನಾ ಇಲಾಖೆಯ ಸಚಿವ ನೀಲಕಂಠ ಹಳರ್ಣಕರ್ ಮಾಹಿತಿ ನೀಡಿದ್ದಾರೆ.

ಪರ್ವರಿಯ ಮಂತ್ರಾಮಯದಲ್ಲಿ ಕರೆದಿದ್ದ ಬೈಠಕ್ ನಲ್ಲಿ ಸಚಿವ ಹಳರ್ಣಕರ್ ಮಾತನಾಡುತ್ತಿದ್ದರು. ಹಲವು ಜನ ಶ್ವಾನ ಪ್ರೇಮಿಗಳು ವಿವಿಧ ದೇಶ ವಿದೇಶಿಯ ನಾಯಿಗಳನ್ನು ಮನೆಯಲ್ಲಿ ಸಾಕಲು ತಂದುಕೊಳ್ಳುತ್ತಾರೆ. ಆದರೆ ಅವರು ನೋಂದಣಿ ಮಾಡಿಕೊಳ್ಳುವುದಿಲ್ಲ. ಆ ನಾಯಿಗೆ ಮರಿಗಳು ಹುಟ್ಟಿದ ನಂತರ ಆ ಮರಿಗಳನ್ನು ರಸ್ತೆಗೆ ಬಿಟ್ಟುಬಿಡುತ್ತಾರೆ. ನಂತರ ಈ ನಾಯಿಗಳು ಸಾರ್ವಜನಿಕರಿಗೆ ಉಪದ್ರವ ನೀಡುತ್ತವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಖಾಯ್ದೆಯನ್ನು ಸಿದ್ಧಪಡಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಸಚಿವ ಹಳರ್ಣಕರ್ ಮಾಹಿತಿ ನೀಡಿದರು.