Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮ ಹಣ ವರ್ಗಾವಣೆ ಅಧಿನಿಯಮದ ಅಡಿಯಲ್ಲಿ ಸತೀಶ್ ಸೈಲ್ ರವರ ಗೋವಾದ ಸಹಕಾರಿಗಳ ಹೆಸರಿನಲ್ಲಿದ್ದ 21 ಕೋಟಿ ಮೌಲ್ಯದ ವಸ್ತುಗಳನ್ನು ಇಡಿ ಅಧಿಕಾರಿಗಳು ಜಫ್ತಿ ಮಾಡಿದ್ದಾರೆ.

ಕಾರವಾರ ಶಾಸಕ ಸತೀಶ್ ಸೈಲ್ ರವರು ಶ್ರೀ ಮಲ್ಲಿಕಾರ್ಜುನ ಶಿಫಿಂಗ್ ಪ್ರೈ ಲಿ ಎಂಬ ಕಂಪನಿಯ ಮೂಲಕ ಪರವಾನಗಿಯಿಲ್ಲದೆಯೇ ಗೋವಾದಿಂದ ಅಕ್ರಮವಾಗಿ ಕಬ್ಬಿಣ ಅದಿರನ್ನು ರಫ್ತು ಮಾಡಿದ್ದರು ಎನ್ನಲಾಗಿದೆ.

Banner Ad

15 ಮಾರ್ಚ 2010 ರಂದು ಕರ್ನಾಟಕದ ಬೇಲಿಕೇರಿ ಬಂದರಿನಲ್ಲಿ ಅಧಿಕಾರಿಗಳು ನಡೆಸಿದ ಪರಿಶೀಲನೆ ಸಂದರ್ಭದಲ್ಲಿ ಬೃಹತ್ ಪ್ರಮಾಣದಲ್ಲಿ ಕಬ್ಬಿಣದ ಅದಿರು ಪತ್ತೆಯಾಗಿತ್ತು. ಈ ಅದಿರಿನಲ್ಲಿ ಕೆಲ ಭಾಗ ಖನನ ಹಾಗೂ ಅರಣ್ಯ ಇಲಾಖೆಯ ಮಂಜೂರಿನ ವಿನಃ ಜಮಾವಣೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 5 ಲಕ್ಷ ಟನ್ ಅದಿರನ್ನು ಜಫ್ತಿ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಕರ್ನಾಟಕ, ಗೋವಾ, ದೆಹಲಿ, ಮುಂಬಯಿಯಲ್ಲಿ ವಿವಿದೆಡೆ 15 ಸ್ಥಳಗಳಲ್ಲಿ ಧಾಳಿ ನಡೆಸಿ ಕಾರ್ಯಾಚರಣೆ ನಂತರ ಕಾರವಾರ ಶಾಸಕ ಸತೀಶ್ ಸೈಲ್ ರವರನ್ನು ಬಂಧಿಸಿದ್ದರು. ಅವರ ಬಳಿಯಿದ್ದ ಸುಮಾರು 8 ಕೋಟಿ ರೂ ಹಣ ಹಾಗೂ ಬಂಗಾರದ ಆಭರಣವನ್ನು ಜಫ್ತಿ ಮಾಡಿದ್ದರು. ಸತೀಶ್ ಸೈಲ್ ರವರಿಗೆ ವೈದ್ಯಕೀಯ ಕಾರಣದ ಮೂಲಕ ಲಭಿಸಿದ್ದ ತಾತ್ಪೂರ್ತಿಕ ಜಾಮೀನು ನವೆಂಬರ್ 7 ರಂದು ರದ್ಧುಗೊಳಿಸಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಗೋವಾದಲ್ಲಿ ಕೋಟಿ ಕೋಟಿ ಆಸ್ತಿ ಜಫ್ತಿ…?
ಗೋವಾದಲ್ಲಿ ಜಫ್ತಿ ಮಾಡಿದ ಆಸ್ತಿಗಳಲ್ಲಿ- ಗೋವಾ ವಾಸ್ಕೊ ಮುರಗಾಂವ ತಾಲೂಕಿನ ಚಿಕಲಿಯಲ್ಲಿ 12,500 ಚೌ.ಮೀ ಜಾಗ, ಪೆದ್ರೊ ಗಲ್ಲೆ ಕೊಟ್ಟಾ ರವರ ಹೆಸರಿನಲ್ಲಿದ್ದ 16.850 ಚೌ.ಮೀ ಜಾಗ, ವಾಸ್ಕೊ ಕದಂಬ ಬಸ್ ನಿಲ್ದಾಣದ ಬಳಿಯಿದ್ದ ಅವರ್ ಲೇಡಿ ಆಫ್ ಮರ್ಸೆಸ್ ಕಟ್ಟಡದ ಮೊದಲ ಮಹಡಿಯಿಂದ ಐದನೇಯ ಮಹಡಿgಯ ವರೆಗಿನ ವ್ಯಾಪಾರಿ ವಸ್ತುಗಳು, ಈ ವಸ್ತುಗಳ ಮಾರುಕಟ್ಟೆ ಮೌಲ್ಯ 64 ಕೋಟಿ ಎಂದು ಹೇಳಲಾಗಿದೆ.

Banner Ad