ಸುದ್ಧಿಕನ್ನಡ ವಾರ್ತೆ
Goa : ಮಂಡ್ಯದಲ್ಲಿ ನಡೆಯುತ್ತಿರುವ 87 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋವಾ ರಾಜ್ಯದಿಂದ ಆಯ್ಕೆಯಾದ ಪ್ರೊ.ಪ್ರಭುಲಿಂಗ ದಂಡಿನ್ ರವರನ್ನು ಸನ್ಮಾನಿಸಲಾಯಿತು.

ಪ್ರೊ.ಪ್ರಭುಲಿಂಗ್ ದಂಡಿನ್ ರವರು ಗೋವಾ ಪೊಂಡಾದ ಫರ್ಮಾಗುಡಿ ಜಿವಿಎಂಎಸ್ ವಾಣಿಜ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಒಬ್ಬ ಕವಿಯೂ ಹೌದು. ಕಳೆದ ಬಾರಿ ಹಾವೇರಿಯಲ್ಲಿ ನಡೆದ 86 ನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ.ದಂಡಿನ್ ರವರಿಗೆ ಕವನ ವಾಚನಕ್ಕೆ ಅವಕಾಶ ಲಭಿಸಿತ್ತು.

ಪ್ರೊ.ಪ್ರಭುಲಿಂಗ್ ದಂಡಿನ್ ರವರಿಗೆ ಈ ಮೊದಲು ಕೂಡ ಹಲವು ಪ್ರಶಸ್ತಿಗಳು ಲಭಿಸಿವೆ.