ಸುದ್ದಿ ಕನ್ನಡ ವಾರ್ತೆ
ಸದ್ಯ ಕೆಲವು ವರ್ಷಗಳಿಂದ ಕಸ್ತೂರಿರಂಗನ್ ವರದಿಗೆ ವಿರೋಧ ಎನ್ನುವ ಸುದ್ದಿ ಗದ್ದಲ ಎಲ್ಲಾ ಕಡೆ ಕೇಳಿ ಬರುತ್ತಿದೆ. ರದ್ದಾಗಿಯೇ ಬಿಟ್ಟಿದೆ ಎಂತಲೂ ಸಮಜಾಯಿಸಿಗಳು ಆಗಾಗ ಕೇಳು ಬರುವುದರ ಒಳಗೆ ಮತ್ತೊಂದು ನೋಟಿಸ್ ಬರುತ್ತದೆ. ಹೀಗಾಗಿ ರದ್ದಾದ ವಿಷಯಗಳು ರದ್ಧಿಯಾಗುತ್ತಲೇ ಇದೆ.
ಕೆಲವು ಪರಿಸರಾಸಕ್ತರಂತೂ ಟಿವಿ ಚಾನೆಲ್ ಮಾಧ್ಯಮಗಳಲ್ಲಿ ನೋಟಿಫಿಕೇಶನ್ ನೋಡದೆ ಲಾಬಿಗಾಗಿ ಗದ್ದಲ ನಡೆದಿದೆ. ಜನರಿಗೆ ಏನು ಗೊತ್ತಿಲ್ಲ ಸುಮ್ಮನೆ ಭಯ ಅಷ್ಟೇ. ಜನರಿಗೆ ಏನೂ ತೊಂದರೆ ಇಲ್ಲ ಕೇವಲ ಬಂಡವಾಳ ಶಾಹಿಗಳಿಗಷ್ಟೇ ತೊಂದರೆ ಬೇಕಾದರೆ ಓದಿ ನೋಡಲಿ, ದೊಡ್ಡ ಡ್ಯಾಮ್, ಗಣಿಗಾರಿಕೆ, ದೊಡ್ಡ ಕಟ್ಟಡಗಳಷ್ಟೇ ಅಂತಹ ತೊಂದರೆಗೆ ಒಳಗಾಗುತ್ತದೆ. ಯಾವುದೇ ಒಕ್ಕಲಿಬ್ಬಿಸುವ ಪ್ರಸ್ತಾಪವಿಲ್ಲ, ಯಾವುದೇ ತೊಂದರೆನೂ ಇಲ್ಲ ಅಂತ ಸಮರ್ಥನೆ ಇಡುತ್ತಾರೆ.
ಇಲ್ಲಿ ಪಟ್ಟಿ ಮಾಡಿದ ಕೆಲವು ಸಮಸ್ಯೆಗಳು ಇಲ್ಲಿ ವಾಸಿಸುತ್ತಿರುವ ಜನರಿಗೆ ಅಂದರೆ ಅರಣ್ಯ ಗ್ರಾಮಗಳಿಗೆ ಅಸ್ತಿತ್ವ ಇರಬೇಕಾದರೆ ಅಂದರೆ ಅಲ್ಲಿ ಜನರು ಬದುಕಬೇಕಾದರೆ,
1) ಮೂಲಭೂತ ಸೌಕರ್ಯಗಳಿಗೆ ಫಾರೆಸ್ಟ್ ಪರವಾನಗಿ ಸರಳಿಕರಿಸುವುದು.
2). ಸದ್ಯ ರಾಜ್ಯದಲ್ಲಿ ನ್ಯಾಷನಲ್ ಪಾರ್ಕ್ ಇರುವ ಜಾಗಗಳನ್ನು ಬಿಟ್ಟುಬಿಡುವುದು.
3). ಎಲ್ಲ ಅರಣ್ಯ ಗ್ರಾಮಗಳನ್ನು ಹೊರತುಪಡಿಸುವುದು (ಯೋಜನೆಯಿಂದ).
4). ಪ್ರೇವಿಲೇಜರ್ (ಕರ್ನಾಟಕ) ಮುಂದುವರಿಕೆ.
5). ವಿಲೇಜ್ ಫಾರೆಸ್ಟ ರೆಜಿಸ್ಟರ್ ನಲ್ಲಿ ನಮೂದಾದ ಕ್ಷೇತ್ರಗಳನ್ನು ಹೊರತುಪಡಿಸುವುದು.
6). ಬೆಟ್ಟ, ಕಾಣೆ ,ಬಾಣೆ, ಕುಮಕಿ ಕುಂಬ್ರಿ, ಹಕ್ಕಲ್, ಬೇಣ , ಗೋಚರಾವ್, ಗೋಮಾಳ ರಸ್ತೆ, ಕಾಲುದಾರಿ, ನೀರಿನ ಕಾಲುವೆ, ಬಾಂಧಾರ, ಪೂಜಾ ಸ್ಥಳಗಳು ಇವೆ ಮುಂತಾದ ಜಾಗಗಳನ್ನು ಹೊರತುಪಡಿಸುವುದು.
7). ಪಾಲಿಸಿದರೆ ಪಾಲು VFC
8). ಪರಿಶಿಷ್ಟ ಪಂಗಡಗಳು ಮತ್ತು ಇತರ ತಲತಲಾಂತರ ದಿಂದ ಅರಣ್ಯದಲ್ಲಿ ವಾಸಿಸುತ್ತಿರುವವರ ಅರಣ್ಯದ ಮೇಲಿನ ಹಕ್ಕು 20೦6- 20೦7-20೦8 ರ ಎ ಮತ್ತು ಬಿ ಮತ್ತು ಸಿ ಹಕ್ಕುಗಳನ್ನು ಊರ್ಜಿತವಾಗಿ ಇಡುವುದು.
9). ಪ್ರತಿಯೊಂದು ಗ್ರಾಮಗಳಿಗೆ ಅನುಕೂಲ ವಾಗುವಂತೆ ಕಲ್ಲು, ಜಲ್ಲಿ, ರೇತಿ, ಮಣ್ಣುಗಳನ್ನು ಒದಗಿಸಲು ಸ್ಥಳ ಕಾಯ್ದಿರಿಸುವುದು.
10). ಬಾದಿತ ಗ್ರಾಮಗಳ ಎಲ್ಲ ಜನರು ಸಹ ಬಾಧಿತರು ಅಂತ ಗುರುತಿಸಿ ಸವಲತ್ತು ನೀಡುವುದು.
ಈ ಎಲ್ಲ ವಿಷಯಕ್ಕೆ ತೊಂದರೆ ಆಗದಂತೆ ಯಾರಾದರೂ ಸಂಧಾನ ಮಾಡುವುದಾದರೆ ಯಾವ ಜನರು ಸಹ ಲಾಬಿಗೆ ಮಣಿಯುವುದಿಲ್ಲ. ರೈತರಿಗೂ ಪರಿಸರ ಉಳಿಯಬೇಕೆಂಬ ಇರಾದೆ ಇದೆ. ಆದರೆ ರೈತರ ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳೆರಡು ಸಹ ಕೂತು ಚರ್ಚಿಸಿ ತೊಂದರೆ ಆಗದಂತೆ ನಿರ್ಣಯ ತೆಗೆದುಕೊಳ್ಳಲು ಇರುವ ತೊಡಕ್ಕೆ ಮಾಹಿತಿಯ ಕೊರತೆ.
ಮಾಹಿತಿ ಇದ್ದವರು ಮುಂದಕ್ಕೆ ಹೋಗುವುದಿಲ್ಲ, ಇಲ್ಲದವರು ಯಾವುದೋ ಒಂದು ಉದ್ದೇಶ ಹಿಡಿದು ಇದ್ದವರಂತೆ ನಟನೆ ಮಾಡುತ್ತಾರೆ. ಹೀಗಾಗಿ ಸರಿಯಾಗಿ ಯಾರಿಗೂ ತೊಂದರೆಯಾಗದೆ ಇರುವಂತೆ ಸಂಧಾನಕಾರರು ಬೇಕು. ಪರಿಸರ ಮತ್ತು ಜನರ ಸಮಸ್ಯೆ ಬಗೆಹರಿಸುವ ಮನಸ್ಸಿದ್ದವರಾದರೆ ಆದಿತು. ಸಂಧಾನದ ಮೂಲಕ ಮಾಡಬಹುದಾದ ವಿಷಯವನ್ನು ಹಾಗೆ ಬಿಟ್ಟರೆ ಹೇಗೇಗೋ ಆಗಿ ಕಾನೂನು ಜಾರಿಯಾದಿತು. ಸಂಧಾನಕಾರರು ಕೃಷ್ಣ ಸಂಧಾನ ಮಾಡಬಾರದು, ಸಂಧಾನವನ್ನೇ ಮಾಡಬೇಕು.
ಇಂತಿ,
ಗೋಪಾಲ್ ಭಟ್ ಶಿವಪುರ
ಉತ್ತರ ಕನ್ನಡ ಜಿಲ್ಲಾ ಭಾರತೀಯ ಕಿಸಾನ್ ಸಂಘ ಉಪಾಧ್ಯಕ್ಷರು ಮತ್ತು ಸಮಾಜಸೇವಕರು.
