ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ. ಹುಟಕಮನೆ ಗ್ರಾಮದ ಮೂಲೆಗುಂಡ್ಕಲ್ ನಲ್ಲಿ ಬೆಚ್ಚಿಬಿಳಿಸುವ ಘಟನೆ ಎಂದು ನಡೆದಿದೆ. ಮನೆಯ ಬಾಗಿಲು ಮುರಿದು ಮನೆಯವರಿಗೆ ಚಾಕು ತೋರಿಸಿ ಬೆದರಿಕೆ ಒಡ್ಡಿ 3,62,000 ರೂ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತು, ಹಣ ಹಾಗೂ ಮೊಬೈಲ್ ದೋಚಿಕೊಂಡು ಹೋದ ಘಟನೆ ನಡೆದಿದೆ.

ಮೂಲೆ ಗುಂಡಕಲ್ ನಿವಾಸಿ ರಾಮಚಂದ್ರ ಮಹಾಬಲೇಶ್ವರ ಭಟ್ ರವರ ಮನೆಗೆ ಮುಂದಿನ ಬಾಗಿಲು ಮುರಿದು ಒಳ ನುಗ್ಗಿದ ದುಷ್ಮ ದುಷ್ಕರ್ಮಿಗಳು ಮನೆಯವರಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾರೆ.

ನಂತರ ಕಪಾಟಿನಲ್ಲಿದ್ದ ಸುಮಾರು 20 ಗ್ರಾಂ ತೂಕದ ಕರಿಮಣಿಸರ, ಹತ್ತು ಗ್ರಾಂ ತೂಕದ ಎರಡು ಬಂಗಾರದ ಬಳೆಗಳು, 12 ಗ್ರಾಂ ತೂಕದ ಎರಡು ಜೊತೆ ಕಿವಿಯೋಲೆ, ಮೂರು ಗ್ರಾಂ ತೂಕದ ಉಂಗುರ ಹಾಗೂ ಒಂದು ಗ್ರಾಂ ತೂಕದ ಲಾಕೆಟ್ ಸೇರಿದಂತೆ ಒಟ್ಟು 56 ಗ್ರಾಂ ಬಂಗಾರವನ್ನು ದೋಚಿದ್ದಾರೆ.

ಈ ಘಟನೆಯ ನಂತರ ರಾಮಚಂದ್ರ ಭಟ್ ರವರು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.