ಸುದ್ದಿ ಕನ್ನಡ ವಾರ್ತೆ
ಗೋವಾ: ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಅಮೃತಹಸ್ತದಿಂದ ‘ಸನಾತನ ಪಂಚಾಂಗ 2027’ ಕನ್ನಡ ಆ್ಯಪ್ ಲೋಕಾರ್ಪಣೆ !
ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಪವಿತ್ರ ಹಸ್ತದಿಂದ ‘ಸನಾತನ ಪಂಚಾಂಗ 2027’ ಈ ಕನ್ನಡ ಆ್ಯಪ್ ಅನ್ನು ಭಕ್ತಿಪೂರ್ವಕ ವಾತಾವರಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಸ್ವಾಮೀಜಿಯವರು ಪಂಚಾಂಗ ಆ್ಯಪ್ಗೆ ತಮ್ಮ ಆಶೀರ್ವಾದವನ್ನು ನೀಡಿದರು. ಈ ಪಂಚಾಂಗ ಆ್ಯಪ್ ಕೇವಲ ಕನ್ನಡ ಮಾತ್ರವಲ್ಲದೆ, ಒಟ್ಟು ಏಳು ಭಾಷೆಗಳಲ್ಲಿ ಲಭ್ಯವಿರುವ ಬಗ್ಗೆ ಸ್ವಾಮೀಜಿಯವರಿಗೆ ಮಾಹಿತಿ ನೀಡಿದಾಗ, ಅವರು “ಚೆನ್ನಾಗಿದೆ” ಎಂದು ಉದ್ಗರಿಸಿ ಈ ಕಾರ್ಯವನ್ನು ಶ್ಲಾಘಿಸಿದರು. ಹಾಗೆಯೇ ಈ ಆ್ಯಪ್ಗೆ ಇದುವರೆಗೆ 40 ಲಕ್ಷಕ್ಕೂ ಅಧಿಕ ಡೌನ್ಲೋಡ್ಗಳಾಗಿವೆ ಎಂದು ತಿಳಿದು ಅವರು ವಿಶೇಷ ಸಂತಸ ವ್ಯಕ್ತಪಡಿಸಿ ಈ ಯಶಸ್ಸನ್ನು ಪ್ರಶಂಸಿಸಿದರು. ಸ್ವಾಮೀಜಿಯವರ ಹಸ್ತದಿಂದ ಕನ್ನಡ ಆ್ಯಪ್ ಲೋಕಾರ್ಪಣೆಗೊಂಡಿದ್ದಕ್ಕಾಗಿ ‘ಸನಾತನ ಪಂಚಾಂಗ’ ಸಮೂಹದ ಪರವಾಗಿ ಅವರ ಚರಣಗಳಲ್ಲಿ ಕೃತಜ್ಞತೆಯನ್ನು ಅರ್ಪಿಸಲಾಯಿತು. ಈ ವೇಳೆ ‘ಸನಾತನ ಪಂಚಾಂಗ’ ಸಮೂಹದ ಪ್ರತಿನಿಧಿಯಾಗಿ ಶ್ರೀ. ಸಂಗಮ ಬೋರ್ಕರ್ ಉಪಸ್ಥಿತರಿದ್ದರು.
‘ಸನಾತನ ಪಂಚಾಂಗ’ ಈ ಆ್ಯಪ್ ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಈ ಎರಡೂ ಆವೃತ್ತಿಗಳಲ್ಲಿ ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ, ತೆಲುಗು ಮತ್ತು ತಮಿಳು ಹೀಗೆ 7 ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಆಂಡ್ರಾಯ್ಡ್ (Android) ಆವೃತ್ತಿಯಲ್ಲಿ ಎಲ್ಲಾ ಭಾಷೆಗಳ ಆ್ಯಪ್ 40 ಲಕ್ಷಕ್ಕಿಂತ ಹೆಚ್ಚು ಹಾಗೂ ಐಒಎಸ್ (iOS) ವ್ಯವಸ್ಥೆಯಲ್ಲಿ 7 ಲಕ್ಷಕ್ಕಿಂತ ಹೆಚ್ಚು ಭಕ್ತರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ತಾವು ಸ್ವತಃ, ತಮ್ಮ ಸಂಬಂಧಿಕರು, ಸ್ನೇಹಿತರು ಮತ್ತು ಕಚೇರಿಯ ಸಹೋದ್ಯೋಗಿಗಳಿಗೆ ಈ ಅತ್ಯಂತ ಉಪಯುಕ್ತ ಆ್ಯಪ್ ಅನ್ನು ಡೌನ್ಲೋಡ್ ಮಾಡಲು ಪ್ರೇರೇಪಿಸಿ ಭಾರತೀಯ ಸಂಸ್ಕೃತಿಯ ಪ್ರಸಾರದಲ್ಲಿ ಭಾಗವಹಿಸಬೇಕು, ಎಂದು ‘ಸನಾತನ ಪಂಚಾಂಗ’ದ ವತಿಯಿಂದ ವಿನಂತಿಸಿಕೊಳ್ಳಲಾಗುತ್ತಿದೆ.
‘ಸನಾತನ ಪಂಚಾಂಗ ಆ್ಯಪ್’ನ ಮಾಧ್ಯಮದಿಂದ ದೈನಂದಿನ ಶುಭ ಮುಹೂರ್ತ, ಹಬ್ಬ-ಹರಿದಿನಗಳು, ಧರ್ಮಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಉಪಯುಕ್ತ ಟಿಪ್ಸ್, ಸುವಿಚಾರಗಳು ಮತ್ತು ದೈನಂದಿನ ಜೀವನಕ್ಕೆ ಅವಶ್ಯವಿರುವಂತಹ ಅಮೂಲ್ಯ ಮಾಹಿತಿಯು ಸುಲಭವಾಗಿ ಲಭ್ಯವಾಗುತ್ತದೆ. ಸಂಕಷ್ಟ ಚತುರ್ಥಿ, ಏಕಾದಶಿಯಂತಹ ಮಹತ್ವದ ತಿಥಿಗಳ ಮುನ್ಸೂಚನೆ, ದಿನ ವಿಶೇಷ, ಹೋಮ್ಸ್ಕ್ರೀನ್ ವಿಜೆಟ್ ಮತ್ತು ರಿಮೈಂಡರ್ನಂತಹ ಅನೇಕ ಆಧುನಿಕ ಸೌಲಭ್ಯಗಳು ಈ ಆ್ಯಪ್ನಲ್ಲಿ ಸೇರಿವೆ.
