ಸುದ್ದಿ ಕನ್ನಡ ವಾರ್ತೆ
Goa (ಮಡಗಾಂವ): ಕನ್ನಡ ರಾಜ್ಯೋತ್ಸವದಂದು ಗೋವಾ ಕನ್ನಡ ಸಂಘ (ರಿ) ಮಡಗಾಂವ, ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಸಾಧಕರಿಗೆ ಸನ್ಮಾನ,ಸುಂದರ ಸುಗಮ ಸಂಗೀತ ರಾಜ್ಯೋತ್ಸವ ಗೀತೆಗಳ ವೈಭವ,ಹಾಗೂ ಕನ್ನಡ ನಾಡು ನುಡಿ ಗೀತೆ ಲೋಕಾರ್ಪಣೆ ಹೀಗೆ ವಿಭಿನ್ನ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಮೇಳೈಸಿದವು.
ಖ್ಯಾತ ಸುಗಮ ಸಂಗೀತ ತಂಡ ಕದಂಬ ಕಲಾ ವೇದಿಕೆ ನೆರೆದ ಕನ್ನಡಿಗ ಮನಸುಗಳನ್ನು ನಾಡು ನುಡಿ ಗೀತೆಗಳೊಂದಿಗೆ ರಂಜಿಸಿತು. ಗಾಯಕ ಲೇಖಕ ಕದಂಬ ರತ್ನಾಕರ ವಿರಚಿತ ನಾಡು ನುಡಿ ಗೀತೆ ಹೊನ್ನುಡಿಯನ್ನು ಗೋವಾ ಕನ್ನಡ ಸಂಘ ಮಡಗಾಂವದ ಅಧ್ಯಕ್ಷ ಮೋಹನ್ ಕಾಂಬಳೆ , ನಿಕಟಪೂರ್ವ ಅಧ್ಯಕ್ಷ ಕೆ.ಮಲ್ಲಿಕಾರ್ಜುನಪ್ಪ , ಕಾರ್ಯದರ್ಶಿ ಕೃಷ್ಣ ಜಿ. ಬಗಲಿ,ಖಜಾಂಚಿ ದಿಗಂಬರ ಕುಲಕರ್ಣಿ ,ದಿವ್ಯಾ ಕದಂಬ, ಉಮಾಕಾಂತ ಗೌಡ, ಜ್ಯೋತಿ ರತ್ನಾಕರ ಲೋಕಾರ್ಪಣೆಗೊಳಿಸಿದರು.
ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ಕದಂಬ ರತ್ನಾಕರ , ದಿವ್ಯಾ ಎಸ್. ಕದಂಬ ಖ್ಯಾತ ನಿರೂಪಕ ಉಮಾಕಾಂತ ಗೌಡ, ಗಾಯಕಿ ಜ್ಯೋತಿ ಕದಂಬ, ಯಶಸ್ವಿನಿ , ಶ್ರೇಯಾ ಪ್ರಸ್ತುತಪಡಿಸಿದ ರಾಜ್ಯೋತ್ಸವ ಗೀತೆಗಳಿಗೆ ಕಾರ್ಯಕ್ರಮದುದ್ದಕ್ಕೂ ಗೋವಾ ಕನ್ನಡ ಅಭಿಮಾನಿಗಳು ಹಾಡಿ ಕುಣಿದು ನಲಿದು ಸಂಭ್ರಮಿಸಿದರು. ಕಾರ್ಯಕ್ರಮವನ್ನು ಮಮತಾ ಕಾರ್ವಾರ್ಕರ್ ಸೊಗಸಾಗಿ ನಿರ್ವಹಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ಓಂಕಾರ್ ಐನಾಪುರ ಹಾಗೂ ಶಿಕ್ಷಕಿ ಶ್ರೀಮತಿ ವಿದ್ಯಾ ವಿವೇಕ್ ಇಂಚಲಮಠ ಅವರನ್ನು ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಅದೇ ರೀತಿ, £ ಕನ್ನಡಿಗರ ಹೆಮ್ಮೆಯ ಕ್ರೀಡಾಪಟುಗಳಾದ ಕುಮಾರಿ ಗೌರವಿ ನಾಯ್ಕ್ ಹಾಗೂ ಕುಮಾರಿ ಅವಿಕಾ ಶೆಟ್ಟಿ ಅವರು ಗೋವಾ ರಾಜ್ಯದ ಅಂಡರ್-17 ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿ, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೋವಾ ರಾಜ್ಯಕ್ಕೆ ಹಾಗೂ ಕನ್ನಡಿಗರಿಗೆ ಕೀರ್ತಿ ತಂದಿರುವುದನ್ನು ಗುರುತಿಸಿ, ಅವರ ಕ್ರೀಡಾ ಸಾಧನೆಯನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಸಂಘದ ವತಿಯಿಂದ ಸನ್ಮಾನಿಸಲಾಯಿತು.
