ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ನದಿ ಜೋಡಣೆ ವಿರೋಧಿಸಿ ಇಂದು ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ. ಆದರೆ ಈ ಯೋಜನೆಯ ವೈಮಾನಿಕ ಸಮೀಕ್ಷೆ ನಡೆಯುತ್ತಿದೆ ಎಂಬಂತೆ ಕೆಲವು ಭಾಗಗಳಲ್ಲಿ ವಿಮಾನ ಹಾರಾಟ ನಡೆಸುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.

ಬೆಳಿಗ್ಗೆ ಮಂಚಿಕೇರಿ – ಶಿರನಾಲಾ – ಬಿಳಕಿ ಸುತ್ತಮುತ್ತ.. ಮೊಡದ ಒಳಗೆ ಕಣ್ಣಿಗೆ ಕಾಣದೇ ವಿಮಾನ ಹಾರಾಡುತ್ತಿದೆ . ನದಿ ಜೋಡಣೆ‌ ಸರ್ವೆ ವಿಮಾನವೇ ? ಎಂಬ ಪ್ರಶ್ನೆ ಮೂಡಿದೆ.

ಸರ್ಕಾರವು ಅವೈಜ್ಞಾನಿಕವಾಗಿ ಹಾಗೂ ಜನ ವಿರೋಧಿ ನದಿ ಜೋಡಣೆಗೆ ಮುಂದಾಗಿದೆ. ಇದನ್ನು ವಿರೋಧಿಸಿ ಇಂದು ಮಂಗಳವಾರ ಯಲ್ಲಾಪುರದಲ್ಲಿ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ. ಹೀಗಿದ್ದರೂ ಕೂಡ ಸರ್ಕಾರ ಜನರ ಬಗ್ಗೆ ಯಾವುದೇ ಜವಾಬ್ದಾರಿಯುತ ಕಾಳಜಿ ತೋರಿಸದೆ ಮತ್ತೆ ಸರ್ವೆ ಕಾರ್ಯವನ್ನು ಮುಂದುವರಿಸಿದೆಯೇ ಎಂಬ ಪ್ರಶ್ನೆ ಎದುರಾಗಿದೆ.