ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ವಿವಿದೋದ್ದೇಶ ಸೇವಾ ಸಹಕಾರಿ ಸಂಘ ದ ಸಹಯೋಗದಲ್ಲಿಸಂಘದ ಆವಾರ ಯರಮುಖ ದಲ್ಲಿ ರವಿವಾರ ದಿನಾಂಕ 05 ರಂದು ಈಸೀ ಲೈಫ್ ಜೋಯಿಡಾ ಇವರು ವಿವಿಧ ಯಂತ್ರ ಗಳ ಪ್ರಾತ್ಯಕ್ಷಿಕೆ ಯನ್ನು ಇಟ್ಟು ಕೊಂಡಿರುತ್ತಾರೆ.

ಕಾರ್ಬನ್ ಫೈಬರ್ ದೋಟಿ ಮತ್ತು ರೈತರ ಎಲ್ಲಾ ಕೃಷಿ ಯಂತ್ರೋಪಕರಣಗಳ ಉಚಿತ ಪ್ರಾತ್ಯಕ್ಷಿತೆ ಮತ್ತು ಸರ್ವಿಸ್ ಕ್ಯಾಂಪ್ ನ್ನು ನಡೆಸುತ್ತಿದ್ದಾರೆ. ಆದ್ದರಿಂದ ತಾಲೂಕಿನ ಎಲ್ಲಾ ಆಸಕ್ತ ರೈತರು ಈ ಕಾರ್ಯಕ್ರಮ ದ ಲಾಭ ಪಡೆದು ಕೊಳ್ಳಲು ವಿನಂತಿಸಲಾಗಿದೆ.