ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ತಾಲೂಕಿನ ಅಣಶಿ ಗ್ರಾಮದ ರೈತ ಕಾಶಿನಾಥ್ ಸೋಮಣ್ಣ ಕಾಜಗಾರ್ (60) ಕಣಜ ನೊಣ ದಾಳಿಯಿಂದ ಜೀವನ್ಮರಣ ನಡುವೆ ಹೊರಾಡುತಿದ್ದರು. ಶನಿವಾರ  ಬಾಂಬೋಲಿ ಜಿ ಎಮ್ ಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆಯಿಂದ ಪರಿಹಾರದ ಭರವಸೆ ನಂತರ ಸ್ವಗ್ರಾಮ ಅಣಶಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಕಳೆದ ಗುರುವಾರ ರೈತ ಕಾಶಿನಾಥ್ ಸೋಮಣ್ಣ ಕಾಜುಗಾರ್ (60) ಮೇಲೆ ಕಣಜ ಹುಳು ದಾಳಿ ಮಾಡಲಾಗಿದೆ. ಕಾರವಾರ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಂಬೋಲಿ ಜಿ ಎಮ್ ಸಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ರೈತ ಕಾಶಿನಾಥ್ ಸಾವನ್ನಪ್ಪಿದ್ದಾರೆ.

ಪರಿಹಾರದ ಭರವಸೆ

ಅಣಶಿ ವನ್ಯಜೀವಿ ವಲಯದ ಅರಣ್ಯ ಅಧಿಕಾರಿ ರಾಮು ಗೌಡ ರವರು, ನಿಲೇಶ್ ಶಿಂದೆ ಡಿಎಫ್ ಓ ಕಾಳಿ ಹುಲಿ ಯೋಜನೆ ದಾಂಡೇಲಿ ರವರ ಮಾರ್ಗದರ್ಶನದಲ್ಲಿ ಮೃತ ರೈತನ ಮನೆಗೆ ಭೇಟಿ ನೀಡಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇಲಾಖೆಯಿಂದ ಪರಿಹಾರ, ವೈದ್ಯಕೀಯ ಖರ್ಚು ಮತ್ತು ಕಾನೂನು ಅಡಿಯಲ್ಲಿ ಸಾಧ್ಯವಾದರೆ ಕುಟುಂಬದ ಸದಸ್ಯರಿಗೆ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಏನೇ ಆದರೂ ಕಾಡು ಪ್ರಾಣಿಗಳಿಂದ ಮಾನವರಿಗೆ ಹಾನಿ ಯಾದರೆ ಅರಣ್ಯ ಇಲಾಖೆ ಕೂಡಲೇ ಸ್ಪಂದಿಸಬೇಕು ಎಂಬ ಮಾತುಗಳು ಕೇಳಿಬಂದಿವೆ