ಸುದ್ಧಿಕನ್ನಡ
ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಟೈಗರ್ ರಿಸರ್ವ್ ದಲ್ಲಿರುವ ಅನೇಕ ಹಳ್ಳಿಗಳಿಗೆ ಸರ್ವಋತು ಸಂಪರ್ಕ ರಸ್ತೆಗಳಿಲ್ಲದೆ ಮಳೆಗಾಲದಲ್ಲಿ ಗರ್ಭಿಣಿ, ಬಾಳಂತಿ, ವೃದ್ಧರು ಮತ್ತು ಕಾಯಿಲೆಗೆ ಬಿದ್ದವರನ್ನು ಕಂಬಳಿಯಲ್ಲಿ ಕಟ್ಟಿಕೊಂಡೆ ಹೊತ್ತು ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ಈ ಭಾಗದ ಹಲವಾರು ಹಳ್ಳಿಗಳಲ್ಲಿ ಇದೆ.
ಗೋವಾ ಗಡಿ ಪ್ರದೇಶ ಅತಿ ಹಿಂದುಳಿದ ಜನಾಂಗ ಮತ್ತು ಅತಿ ಹಿಂದುಳಿದ ಪ್ರದೇಶ ಜೋಯಿಡಾ ತಾಲೂಕು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಬಡಪಾಯಿಗಳು 2003 ರಲ್ಲಿ ನ್ಯಾಷನಲ್ ಪಾರ್ಕ್ ಪ್ರದೇಶ ಅಂತ ಘೋಷಿಸಲು ಸ್ವಖುಷಿಯ ಒಪ್ಪಿಗೆ ಕೊಟ್ಟರು. ಸರ್ಕಾರದ ಸಂಧಾನ ಪ್ರಕ್ರಿಯೆ ಯ ಕಾರಣ ಅನೇಕ ಸೌಲಭ್ಯ ಪಡೆಯಲು ಅವಕಾಶ ಇರುವಂತೆ ನೋಟಿಫಿಕೇಶನ್ ಆದ ನಂತರ ಸದ್ಯ ಟೈಗರ್ ರಿಸರ್ವ್ ಅಂತ ಸಹ ಘೋಷಣೆ ಆಗಿದೆ.
ಪರಿಸರದಲ್ಲಿ ಮಾವಳಂಗಿ ಅಣೆಕಟ್ಟು ಕಾಳಿ ನದಿಗೆ, ಕಾನೇರಿ ನದಿಗೆ ಕಾನೇರಿ ಹತ್ತಿರ ಅಣೆಕಟ್ಟು, ಅಣಶಿ ಹತ್ತಿರ ನದಿಗೆ ಅಣೆಕಟ್ಟು, ಇವೆಲ್ಲ ಕಾಮಗಾರಿ ನಿಂತಿತು.
ಜತೆಗೆ ಅನೇಕ ಮ್ಯಾಂಗನೀಸ್ ಅದಿರು ತೆಗೆಯುವ ಗಣಿಗಳು ನಿಂತು ಹೋದವು, ಬಿದಿರು ಕಡಿಯುವ ಪ್ರಕ್ರಿಯೆ ನಿಂತು ಹೋಯಿತು. ಸರ್ಕಾರದ ಕಂಪಾರ್ ಮೆಂಟ್ ಮರ ಕಡಿಯುವುದು ಸಹ ನಿಂತು ಹೋದ ಕಾರಣ ದಾಂಡೇಲಿ ನಗರದಲ್ಲಿಯ ಪೆರೋ ಮ್ಯಾಂಗನೀಸ್ ಕಾರ್ಖಾನೆ, ಕಾಗದ ಕಾರ್ಖಾನೆ ಮತ್ತು ಮರದಿಂದ ವಸ್ತು ತಯಾರಿಸುವ ದೊಡ್ಡ ಪ್ಲೈವುಡ್ ಕಾರ್ಖಾನೆ ಗಳಿಗೆ ಕಚ್ಚಾವಸ್ತುವಿನ ಕೊರತೆಯಾಗಿ ತಯಾರಿಕೆ ತುಂಬಾ ಕಡಿಮೆಯಾಗಿ ಕಾರ್ಮಿಕರು ಭಾರಿ ತೊಂದರೆಗೆ ಒಳಗಾದರು.
ಸರ್ಕಾರಗಳು ಯಾವುದೇ ಯೋಜನೆ ಮಾಡಿ ಜನರಿಗೆ ತೊಂದರೆಯಾದಾಗ ನಂತರದ ದಿನಗಳಲ್ಲಿ ತನ್ನ ಕರ್ತವ್ಯವನ್ನು ಮಾಡದಿದ್ದರೆ ಏನೆಲ್ಲಾ ಅವಾಂತರ ಗಳು ಆದರೂ ಅವರನ್ನು ಜಾಗೃತಗೊಳಿಸುವುದು ಅಸಾಧ್ಯವಾದ ಮಾತು. ಹೀಗಾಗಿ ಪ್ರಾಣಿಗಳ ಮತ್ತು ಮಾನವರ ಸಂಘರ್ಷ ಕಡಿಮೆ ಮಾಡುವ ಕೆಲವು ನಿರ್ಧಾರಗಳನ್ನು ಅಧಿಕಾರಿಗಳು ತೆಗೆದುಕೊಂಡರೆ ಕೆಲವು ಆದೇಶಗಳನ್ನು ಸರ್ಕಾರ ನೀಡಬೇಕಾಗುತ್ತದೆ. ಹಾಗಾದರೆ ಮಾತ್ರ ಜನರು ನಿಟ್ಟುಸಿರು ಬಿಡುವಂತಾಗಿ ಈ ನಿಟ್ಟಿನಲ್ಲಿ ಎನ್ ಜಿಒ ಗಳ (ಪರಿಸರವಾದಿ)ಪಾತ್ರ ಬಹಳ ಮುಖ್ಯವಾಗಿದೆ.
ಬಡ ರೈತರಿಗೆ ತಮಗೆ ನ್ಯಾಯ ಒದಗಿಸಿಕೊಳ್ಳಲು ಆರ್ಥಿಕ -ಶಿಕ್ಷಣ ಸಾಮಾಜಿಕ ಕಾರಣಗಳಿಂದ ಆಗುತ್ತಿಲ್ಲ. ವಸ್ತು ಸ್ಥಿತಿಯಲ್ಲಿ ರೈತರೇ ಪರಿಸರ ಹಾನಿಗೆ ಕಾರಣರಾಗಿದ್ದಾರೆ ಎನ್ನುವ ಧ್ವನಿಗಳಿಗೆ ವೇದಿಕೆ ಸಿಗುತ್ತದೆ. ಆದರೆ ಜನರ ತೊಂದರೆಯನ್ನು ಹೇಗೆ ನಿಭಾಯಿಸಬೇಕು ಅನ್ನುವುದು ತಿಳಿಸಿಕೊಡಲು ವೇದಿಕೆ ಸೃಷ್ಟಿಸಿ ಕೊಳ್ಳಲು ಜನರ ಹತ್ತಿರ ಆಗುತ್ತಿಲ್ಲ. ಹೀಗಾಗಿ ಜನರ ಮೇಲೆ ಕೂರಿಸಿದ ಗೂಬೆಯನ್ನು ಹಾರಿಸಲು ಆಗುತ್ತಿಲ್ಲ.
ಸದ್ಯ ನವೆಂಬರ್ 3 ನೇ ತಾರೀಕಿಗೆ ಯಲ್ಲಾಪುರದಲ್ಲಿ ಪಂಪ್ಡ ಸ್ಟೋರೇಜ್ ಯೋಜನೆ ಬೇಡ್ತಿ- ಅಘನಾಶಿನಿ ನದಿ ಜೋಡಣೆಯಿಂದ ಆಗುತ್ತಿರುವ ಪರಿಸರ ಹಾನಿ ಬಗ್ಗೆ ಪರಿಸರದ ರೈತರೇ ಹೋರಾಟ ನಡೆಸುತ್ತಿದ್ದಾರೆ. ನೇರವಾಗಿ ಸಮುದ್ರ ಸೇರಿ ಅನಾವಶ್ಯಕವಾಗಿ ಹಾಳಾಗುತ್ತಿರುವ ಪೆÇೀಲಾಗುವ ನೀರನ್ನು ಲಕ್ಷಾಂತರ ಜನರಿಗೆ ಉಪಯೋಗಕ್ಕೆ ತೆಗೆದುಕೊಳ್ಳುತ್ತೇವೆ ಅಂತ ಸಮುದ್ರದಲ್ಲಿ ಸಾವಿರಾರು ಜಾತಿಯ ಜಲಚರ ಪ್ರಾಣಿಗಳಿಗೆ ನೀರು ಆಹಾರ ಒದಗುವುದರ ಜೊತೆ ಹರಿಯುವ ಪ್ರದೇಶದಲ್ಲಿಯ ಕಾಡಿನ ಪ್ರಾಣಿ, ಪಕ್ಷಿ, ಜಲಚರ ಮತ್ತು ಮರಗಿಡಗಳಿಗೆ ನೀರುಣಿಸಿ ಭೂಮಿಯಲ್ಲೂ ನೀರನ್ನು ಇಂಗಿಸುವುದರ ಜೊತೆಗೆ ಇಕ್ಕೆಲಗಳಲ್ಲಿ ಬದುಕು ಕಟ್ಟಿಕೊಂಡ ಜನರು ಅನೇಕರಿದ್ದಾರೆ.
ಈ ವಿಚಾರದ ಬಗ್ಗೆ ಮಾತಾಡದೆ ಕೇವಲವಾಗಿ ಅನೇಕ ಜನರ ಸೌಲಭ್ಯದ ಬಗ್ಗೆ ವಿಚಾರ ಮಾಡಿ ಮಾತನಾಡಿದರೆ ಪರಿಸರದ ಬಗ್ಗೆ ಕಾಳಜಿ ಇಲ್ಲದವರಾಗಲಿಲ್ಲವೇ….? ಸಣ್ಣ ಸಣ್ಣ ನದಿ ತೊರೆಗಳಿಂದಲೇ ಸಮುದ್ರ , ಸಮುದ್ರದ ನೀರೇ ಆವಿಯಾಗಿ ಮಳೆ ಬೆಳೆ, ಹೀಗಿದ್ದು ಅನಾವಶ್ಯಕವಾಗಿ ಹರಿಯುವ ನದಿ ಅಂತ ಹೇಳುವುದನ್ನು ಪ್ರಶ್ನೆ ಮಾಡದೇ ಸುಮ್ಮನಿರುವುದು ಅಜ್ಞಾನದ ಪರಮಾವಧಿ ಅಲ್ಲವೇ…?
ಅತ್ಯಂತ ಹಳ್ಳಿ ಮತ್ತು ಕುಗ್ರಾಮದಲ್ಲಿ ಬದುಕಿ ಮರ ಗಿಡ ನದಿ ಪ್ರಾಣಿಗಳ ಜೊತೆಗೆ ಸಾವಿರಾರು ವರ್ಷಗಳಿಂದಲೂ ತಲೆತಲೆ ಮಾರುಗಳನ್ನು ಕಳೆಯುತ್ತಾ ಇಲ್ಲೇ ಇರುವವರಿಗೆ ಪರಿಸರ ಹಾನಿಗೆ ರೈತರೇ ಕಾರಣ ಅನ್ನುವುದು .., ಸರ್ಕಾರಗಳೇ ಅನೇಕ ಪರಿಸರ ಹಾನಿಕಾರಕ ಕೆಲಸಗಳಿಗೆ ಮಂಜೂರಿ ಕೊಡುವುದು.,. ಅದು ಜನರ ಸಲುವಾಗಿ ಅಂದರೆ ಶಹರದಲ್ಲಿಯ ಜನರಿಗೆ ಒಳಿತು ಮಾಡಲು ಸರ್ಕಾರಗಳು ಅಧಿಕಾರಿಗಳನ್ನು ಬಳಸಿಕೊಂಡು ಕಾನೂನು ಅಂತ ತಾವೇ ಮಾಡಿದ ಕಾನೂನುಗಳನ್ನು ಬಡ ಮುಗ್ಧ ಜನರ ಅಂದರೆ ತಲತಲಾಂತರ ಗಳಿಂದ ಅರಣ್ಯದಲ್ಲಿ ಅರಣ್ಯ ಗ್ರಾಮಗಳಲ್ಲಿ ವಾಸಿಸುವ ಜನರ ಪರಿಸರಕ್ಕಾಗಿ ತ್ಯಾಗ ಮಾಡಿದವರ ಮೂಲಭೂತ ಸೌಕರ್ಯಗಳಿಗೆ ಸಹ ಅವಕಾಶವಿಲ್ಲದಂತೆ ಕಾನೂನು ರಚಿಸಿ, ಜನರು ತತ್ತರಿಸಿ ಶಾಪ ಹಾಕಿ ಪ್ರಾಣಿಗಳಿಂದ ಪ್ರಾಣ ಕಳೆದುಕೊಳ್ಳುವಂತೆ ಮಾಡಿ ಮೌನವಾಗಿ ರಾರಾಜಿಸುತ್ತಾ ಇರುವವರು ಕನಿಷ್ಠ ಸರ್ವಋತು ರಸ್ತೆ ಮಾಡಲು ಸರಳಿಕೃತ ಪರವಾನಗಿ ಮಾರ್ಗ ಕಂಡುಹಿಡಿದು ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿರುವ ದಾರಿಹೋಕರ ಕಾಲ್ನಡಿಗೆಯಿಂದಲೇ ಕಾಲ ಕಳೆಯುತ್ತಿರುವ ಜನರ ಪ್ರಾಣ ಕಾಪಾಡುವ ಕನಿಷ್ಠ ಮಾನವತೆಯನ್ನು ತ್ಯಾಗ ಮಾಡಿದವರ ಬಗ್ಗೆ ಪುನರ್ ವ್ಯವಸ್ಥೆ ಕಲ್ಪಿಸಿ ಕೊಡುವಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡುವ ಜನರ ಪಾತ್ರ ಬಹುಮುಖ್ಯ ಇರಬಹುದೇನೋ ಅಂತ ನನಗೆ ಅನಿಸುತ್ತದೆ.
ಕಂಡು ಕಾಣದಂತೆ ಕೇಳಿಯೂ ಕೇಳಿದಂತೆ ಇರುವ ಅಭ್ಯಾಸ ಮಾಡಿಕೊಂಡ ಎಂಎಲ್ ಎ, ಎಂಪಿ ಗಳ ಹತ್ತಿರ ಏನೋ ಇದೆ ಅಂತ ಜನ ಅಂದುಕೊಂಡರೆ ಅದು ನಮ್ಮ ಅರಿವಿನ ಕೊರತೆಯಾದಿತು.
ತಮ್ಮ ಮುಖಂಡರ ಮುಂದೆ ಕೈಕಟ್ಟಿ ಕುಳಿತು ತಲೆ ಅಲ್ಲಾಡಿಸಿ ಪರವಾಗಿ ಇರುವವರು ಹೌದು.,…. ವಿರೋಧ ಇರುವವರು ಇಲ್ಲ ಅಂತ ಹೇಳುವುದೊಂದೇ ಹೊರತು ಹೆಚ್ಚಿಗೆ ಕೇಳಿದರೆ ಇರುವ ಅಧಿಕಾರವೂ ಕಳೆದುಕೊಳ್ಳಬೇಕಾಗುತ್ತದೆ ಇದು ಇರುವ ಸ್ಥಿತಿ.
ಇಲ್ಲಿ ಇರುವ ಉತ್ತರ- ಜನಸಾಮಾನ್ಯರು ಕಾನೂನು ಅರಿಯಬೇಕು ಈಗಿನ ಸ್ಥಿತಿ ಅರಿಯಬೇಕು. ವಸ್ತು ಸ್ಥಿತಿ ಸಾಮಾಜಿಕ ನ್ಯಾಯ ಗೊತ್ತಾಗಬೇಕು. ನಮ್ಮ ಸಣ್ಣ ಮನಸ್ಸನ್ನು ವಿಶಾಲ ಮಾಡಿಕೊಳ್ಳಬೇಕು. ಏನೂ ಮುಲಾಜಿಲ್ಲದೆ ವಸ್ತು ಸ್ಥಿತಿಯನ್ನು ಚರ್ಚೆ ಮಾಡಬೇಕು. ಉತ್ತರ ಹುಡುಕಲು ಪ್ರಯತ್ನ ನಡೆಯಬೇಕು., ಇಲ್ಲದಿದ್ದರೆ ಈ ರೀತಿ ತಪ್ಪು ಮಾಡುವವರಿಗೆ ಶನಿ ದೇವರೇ ಶಿಕ್ಷೆ ಕೊಡುತ್ತಾರೆ ನಮಗೆ ನೋಡಲು ನೋವಾಗುತ್ತದೆ ಹಾಗಾಗದಂತೆ ನವ ದುರ್ಗೆ ಎಲ್ಲ ದೋಷಗಳನ್ನು ಜನರ ಮನಸ್ಸಿನಿಂದ ಓಡಿಸಲಿ ಅಂತ ತಾಯಿ ದುರ್ಗಾಮಾತೆಯಲ್ಲಿ ಪ್ರಾರ್ಥಿಸೋಣ.
ಗೋಪಾಲ್ ಭಟ್ ಶಿವಪುರ
ಉಪಾಧ್ಯಕ್ಷರು
ಭಾರತೀಯ ಕಿಸಾನ್ ಸಂಘ
