ಸುದ್ದಿ ಕನ್ನಡ ವಾರ್ತೆ
ವೈಯಕ್ತಿಕ ದ್ವೇಷಕ್ಕೆ 150ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಬಲಿ ಕೊಟ್ಟ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.
ತನ್ನ ಮುಕ್ಕಾಲುವ ಕರೆ ಪ್ರದೇಶದಲ್ಲಿ ಸಣ್ಣಪ್ಪ ಎಂಬ ರೈತ ಅಡಿಕೆ ಗಿಡಗಳನ್ನು ಬೆಳೆದಿದ್ದ. ಇನ್ನೇನು ಮುಂದಿನ ವರ್ಷದಿಂದ ಸಮೃದ್ಧ ಫಸಲು ಬರುವ ನಿರೀಕ್ಷೆಯಲ್ಲಿ ಇದ್ದ ರೈತನಿಗೆ ಈ ಘಟನೆ ಆಘಾತ ತಂದಿದೆ.
ರಾತ್ರೋರಾತ್ರಿ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ವೈಯಕ್ತಿಕ ದ್ವೇಷದ ಕಾರಣದಿಂದ ಅಡಿಕೆ ಗಿಡಗಳನ್ನು ಕಡಿದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
