Banner Ad

ಸುದ್ದಿ ಕನ್ನಡ ವಾರ್ತೆ

ಪಣಜಿ: ಗೋವಾಕ್ಕೆ ಆಗಮಿಸಿರುವ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ನಿಜವಾಗಿಯೂ ಗೋವಾಕ್ಕೆ ಬೆಂಬಲ ನೀಡಲು ಆಗಮಿಸದ್ದಾರೆಯೇ..? ಹಾಗಿದ್ದರೆ ಮಹದಾಯಿ ನದಿ ನೀರು ತಡೆಯುವುದನ್ನು ಮೊದಲು ನಿಲ್ಲಿಸಿ ಗೋವಾಕ್ಕೆ ನೀರು ಬಡಿ ಎಂದು ಬಿಜೆಪಿ ಕಾರ್ಯಕರ್ತರು ಗೋವಾ ದಾಬೋಲಿಂ ವಿಮಾನ ನಿಲ್ದಾಣದ ಬಳಿ ಬ್ಯಾನರ್ ಹಿಡಿದು ಮೌನ ಪ್ರತಿಭಟನೆ ನಡೆಸಿದರು.

Banner Ad

ಗೋವಾದಲ್ಲಿ ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಇಲ್ಲಿನ ಕನ್ನಡಿಗರ ಬಗ್ಗೆ ಕೂಡ ಕರ್ನಾಟಕ ಮುಖ್ಯಮಂತ್ರಿಗಳಿಗೆ ಕಾಳಜಿ ಬೇಕು. ಮಹದಾಯಿ ನದಿ ನೀರು ತಡೆದರೆ ಗೋವಾಕ್ಕೆ ನೀರಿನ ಕೊರತೆ ಉಂಟಾಗಲಿದೆ. ಪರಿಸರದ ಮೇಲೆ ಪರಿಣಾಮ ಬೀರಲಿದೆ. ಇದರಿಂದಾಗಿ ಮಹದಾಯಿ ನೀರನ್ನು ಕರ್ನಾಟಕಕ್ಕೆ ತಿರುಗಿಸುವ ಯೋಜನೆಯನ್ನು ಕೈಬಿಡಿ ಎಂದು ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಗಳ ಮೂಲಕ ಪ್ರತಿಭಟನೆ ನಡೆಸಿದರು.

ಗೋವಾ ಕಾಖಂಡ್ ಯಾತ್ರೆ ನಡೆಸುತ್ತಿರುವ ಕಾಂಗೇಸ್ ಪಕ್ಷಕ್ಕೆ ಮಹದಾಯಿ ನದಿ ನೀರಿಗೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿಗಳ ನಿಲುವು ಪಡೆದುಕೊಳ್ಳಬೇಕು. ಕಾಂಗ್ರೇಸ್ ಪಕ್ಷವು ಮಹದಾಯಿ ವಿಷಯದಲ್ಲಿ ಈ ಮೂಲಕ ರಾಜ್ಯದ ಜನತೆಗೆ ಏನು ಸಂದೇಶ ನೀಡುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಮಾಧ್ಯಮಗಳಗೆ ಉತ್ತರಿಸುತ್ತ ಪ್ರಶ್ನಿಸಿದರು.

ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಗೋವಾಕ್ಕೆ ಆಗಮಿಸುವ ಸಂದರ್ಭದಲ್ಲಿ ವಿಮಮಾನ ನಿಲ್ದಾಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಪತಿಬಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪೋಲಿಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

Banner Ad