Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ದಿನಗಳು ಇತಿಹಾಸ, ನಾನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾತನಾಡುತ್ತದ್ದೇನೆ. ಎಲ್ಲ ವರ್ಗದ ಜನರಿಗೆ ಅಧಿಕಾರ ನೀಡಿ ಅಭಿವೃದ್ಧಿ ಮಾಡಿಕೊಂಡು ಬಂದಿದೆ. ಹೊಸ ಗೋವಾ ನಿರ್ಮಾಣ ಮಾಡಬೇಕಾದರೆ ಮುಂಬರುವ ಗೋವಾ ವಿಧಾನ ಸಭೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ತನ್ನಿ ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನುಡಿದರು.

ಗೋವಾದ ಕಾಂಗ್ರೇಸ್ ಪಕ್ಷ ವಾಸ್ಕೊ ಜುವಾರಿನಗರದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಗೋವಾ ರಾಖಂಡ್ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತದ್ದರು. ಗೋವಾದಲ್ಲಿ ಕನ್ನಡಿಗರೇ ಹೆಚ್ಚಾಗಿರುವ ಕ್ಷೇತ್ರವಾಗಿದ್ದರಿಂದ ಡಿಕೆಶಿ ಕನ್ನಡದಲ್ಲಿಯೇ ಮಾತನಾಡಿದರು. ಹಸ್ತದಲ್ಲಿ ನಿಮ್ಮ ಭವಿಷ್ಯವಿದೆ. ಗೋವಾದಲ್ಲಿ ಹೆಚ್ಚಿನ ಜನರ ಹೆಸರನ್ನು ಗೋವಾ ಮತದಾರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಬಿಜೆಪಿಯು ನೇರವಾಗಿ ಕಾಂಗ್ರೇಸ್ ಪಕ್ಷ ವನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ಇಂತಹ ಕೃತ್ಯ ಮಾಡಿದೆ ಎಂದು ಡಿಕೆಶಿ ಆರೋಪಿಸಿದರು.

Banner Ad

ಬಿಜೆಪಿಯವರು ನನ್ನನ್ನು ಜೈಲಿಗೆ ಕಳುಹಿಸಿದರು. ಆದರೆ ನಾನು ಜೈಲಿನಿಂದ ಹೊರಗೆ ಬಂದು ನಾನು ಮತ್ತು ಸಿದ್ಧರಾಮಯ್ಯ ನವರು ಸೇರಿ ಕರ್ನಾಟಕದಲ್ಲಿ ಅಧಿಕರಕ್ಕೆ ಬಂದು ಜನರ ಸೇವೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೇಸ್ ಪಕ್ಷ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಕರ್ನಾಟಕದಲ್ಲಿರುವ ನಿಮ್ಮ ಸಂಬಂಧಿಕರಿಗೂ ಈ ಯೋಜನೆಗಳ ಲಾಭ ಸಿಗುತ್ತಿದೆ. ನಿಮ್ಮನ್ನು ರಕ್ಷಿಸಲು ನಾನು ಬದ್ಧನಾಗಿದ್ದೇನೆ ಎಂದು ಡಿಕೆಶಿ ನುಡಿದರು.

Banner Ad