Banner Ad

ಸುದ್ದಿ ಕನ್ನಡ ವಾರ್ತೆ

ನವದೆಹಲಿ:ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಭಾರತೀಯ ವಾಯುಸೇನೆಯ (IAF) ಮುಂದಿನ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

Banner Ad

​ಕೇಂದ್ರ ಸರ್ಕಾರವು ಅಕ್ಟೋಬರ್ 6, 2026 ರಂದು ಅಧಿಕೃತವಾಗಿ ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಪ್ರಸ್ತುತ ವಾಯುಸೇನೆಯ ಉಪ ಮುಖ್ಯಸ್ಥರಾಗಿ (Vice Chief of the Air Staff) ಸೇವೆ ಸಲ್ಲಿಸುತ್ತಿರುವ ಇವರು, ಅಕ್ಟೋಬರ್ 31, 2026 ರಂದು ಹಾಲಿ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರ ನಿವೃತ್ತಿಯ ಬಳಿಕ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

 

ಆ ದಿನದಿಂದ ಇವರು ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಆಗಿ ವಾಯುಪಡೆಯ 29ನೇ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.ಸುಮಾರು ನಾಲ್ಕು ದಶಕಗಳ ಸುದೀರ್ಘ ಸೇವಾ ಅನುಭವ ಹೊಂದಿರುವ ಅವರು ವಿವಿಧ ಯುದ್ಧವಿಮಾನ, ಸಾರಿಗೆ ವಿಮಾನ ಹಾಗೂ ತರಬೇತಿ ವಿಮಾನಗಳನ್ನು ಹಾರಿಸಿದ ಅಪಾರ ಅನುಭವ ಹೊಂದಿದ್ದಾರೆ.

ಅಕ್ಟೋಬರ್ 8ರಂದು ನಡೆಯಲಿರುವ ಭಾರತೀಯ ವಾಯುಪಡೆಯ 94ನೇ ವಾರ್ಷಿಕೋತ್ಸವದ ಮುನ್ನ ಅವರ ನೇಮಕಾತಿ ಘೋಷಣೆಯಾಗಿದೆ.ಪಿವಿಎಸ್‌ಎಂ (PVSM), ಎವಿಎಸ್‌ಎಂ (AVSM), ವಿಎಂ (VM), ವಿಎಸ್‌ಎಂ (VSM) ಸೇರಿದಂತೆ ವಿವಿಧ ಗೌರವಗಳನ್ನು ಹೊಂದಿರುವ ದೀಕ್ಷಿತ್, 2026ರ ಅಕ್ಟೋಬರ್ 31ರ ಮಧ್ಯಾಹ್ನದಿಂದ ಏರ್ ಚೀಫ್ ಮಾರ್ಷಲ್ ಹುದ್ದೆಯ ಶಾಶ್ವತ ಶ್ರೇಣಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಅಧಿಕಾರಾವಧಿ 2028ರ ಡಿಸೆಂಬರ್ 31ರವರೆಗೆ ಇರಲಿದೆ.

Banner Ad