Banner Ad

ಸುದ್ದಿ ಕನ್ನಡ ವಾರ್ತೆ

ಪಣಜಿ: ಗೋವಾ ರಾಜ್ಯದ್ಯಂತ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ ಗೋವಾ ರಾಖಂಡ್ ಯಾತ್ರ ಇದರಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಅಕ್ಟೋಬರ್ 8ರಂದು ಗೋವಾಕ್ಕೆ ಆಗಮಿಸಲಿದ್ದಾರೆ.

Banner Ad

ದೆಹಲಿಯಲ್ಲಿ ನಡೆಯಲಿರುವ ಜಿಎಸ್‌ಟಿ ಮಂಡಲದ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು ಗುರುವಾರ ನೇರವಾಗಿ ಗೋವಾಕ್ಕೆ ಆಗಮಿಸಲಿದ್ದಾರೆ. ಗೋವಾದ ವಾಸ್ಕೋ ಜುವಾರಿನಗರ ದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಗೋವಾ ರಾಖಂಡ್ ಯಾತ್ರಾ ದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಈ ಕುರಿತು ಗೋವಾ ರಾಜ್ಯ ಬಿಜೆಪಿ ಡಿಕೆ ಶಿವಕುಮಾರ್ ರವರಿಗೆ ಸವಾಲನ್ನು ಹಾಕಿದೆ. ಗೋವಾಕ್ಕೆ ಆಗಮಿಸುವ ಮುನ್ನ ಡಿಕೆ ಶಿವಕುಮಾರ್ ರವರು ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಬೇಕು, ಈ ಕುರಿತಂತೆ ಕಾಂಗ್ರೆಸ್ ಕಾರ್ಯಕರ್ತರು ಕರ್ನಾಟಕದ ಮುಖ್ಯಮಂತ್ರಿಗಳ ಮಹದಾಯಿ ನಿಲುವು ಸ್ಪಷ್ಟನೆ ಪಡೆದುಕೊಳ್ಳಬೇಕು ಎಂದು ಗೋವಾ ಬಿಜೆಪಿ ಆಗ್ರಹಿಸಿದೆ.

ಗೋವಾ ರಾಜ್ಯದ ವಾಸ್ಕೋ ಜುವಾರಿನಗರ ದಲ್ಲಿ ಅತಿ ಹೆಚ್ಚು ಕನ್ನಡಿಗರು ವಾಸಿಸುತ್ತಾರೆ. ವಾಸ್ಕೋ ಭಾಗದಲ್ಲಿ ಇರುವ ಅತಿ ಹೆಚ್ಚು ಕನ್ನಡಿಗರ ಮನ ಸೆಳೆಯಲು ಕಾಂಗ್ರೆಸ್ ಪಕ್ಷ ತಂತ್ರ ರೂಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಗೋವಾ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಆಗಲಿದೆ. ಫೆಬ್ರುವರಿಯಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ. ಕಾಂಗ್ರೆಸ್ ಪಕ್ಷವು ಈ ಯಾತ್ರೆಯ ಮೂಲಕ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದೆ.

ವಾಸ್ಕೋ ಭಾಗದಲ್ಲಿ ಇರುವ ಅತಿ ಹೆಚ್ಚು ಕನ್ನಡಿಗರ ಮತಗಳನ್ನು ಕಾಂಗ್ರೆಸ್ ಪಕ್ಷ ಟಾರ್ಗೆಟ್ ಮಾಡಿದಂತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಕಾಂಗ್ರೆಸ್ ಪಕ್ಷದ ಗೋವಾ ರಾಖಂಡ್ ಯಾತ್ರೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ.

Banner Ad