ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ವಜ್ರಳ್ಳಿಯಲ್ಲಿ ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಿ ಇಟ್ಟಿದ್ದ ಕಡಿ ಹಾಗೂ ಎಂ ಸ್ಯಾಂಡ್ ಕಳುವಾಗಿದೆ. ಈ ಕುರಿತಂತೆ ಮುಂಡಗೋಡ ಗುತ್ತಿಗೆದಾರರೊಬ್ಬರು ಪೊಲೀಸ್ ದೂರು ನೀಡಿದ್ದಾರೆ.
ಪೊಲೀಸ್ ದೂರಿನ ಪ್ರಕಾರ 2025ರ ಡಿಸೆಂಬರ್ ನಿಂದ ಅಕ್ಟೋಬರ್ 4, 2026ರ ಬೆಳಿಗ್ಗೆ 10 ಗಂಟೆಯವರೆಗೆ ವಜ್ರಳ್ಳಿ ಭಾಗದಲ್ಲಿ ಹಂತ ಹಂತವಾಗಿ ಕಡಿ ಹಾಗೂ ಎಂ ಸ್ಯಾಂಡ್ ದಾಸ್ತಾನು ಮಾಡಲಾಗಿತ್ತು. ಹತ್ತು ಲಾರಿ 20mm ಕಡಿ , ಹತ್ತು ಲಾರಿ ಎಂ ಸ್ಯಾಂಡ್, ಆರು ಲಾರಿ 40 ಎಮ್ ಎಮ್ ಕಡಿ ಜಮಾ ಮಾಡಲಾಗಿತ್ತು ಎನ್ನಲಾಗಿದೆ. ಇದರಲ್ಲಿ 4 ಟ್ಯಾಕ್ಟರ್ 20 ಎಮ್ ಎಮ್ ಕಡಿ, 4 ಟ್ರ್ಯಾಕ್ಟರ್ ಎಂ ಸ್ಯಾಂಡ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳ್ಳತನವಾದ ಒಟ್ಟು ವಸ್ತುವಿನ ಮೌಲ್ಯ 36,000 ಎಂದು ಅಂದಾಜಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ತಾಲೂಕಿನಲ್ಲಿ ರಸ್ತೆ ದುಸ್ಥಿತಿ…
ಯಲ್ಲಾಪುರ ತಾಲೂಕಿನ ಅತ್ಯಂತ ಬಹುತೇಕ ರಸ್ತೆಗಳು ಸಂಪೂರ್ಣ ಅಜೀರ್ಣಾವಸ್ಥೆಗೆ ತಲುಪಿದೆ. ಹೀಗಿರುವಾಗ ಅಪ್ಪಿ ತಪ್ಪಿ ಎಲ್ಲೋ ಚೂರು ಪಾರು ರಸ್ತೆಪೆಚ್ ವರ್ಕ್ ಮಾಡಲು ಹಾಕಿದ್ದ ವಸ್ತುವೇ ಕಳ್ಳತನವಾದರೆ ಮುಂದೇನು ಗತಿ ಎಂಬ ಪ್ರಶ್ನೆ ಎದುರಾಗಿದೆ….
