ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ವತಿಯಿಂದ ಶ್ರೀಪತಿ ಗ್ರಾಮದಲ್ಲಿ *ಅಡಿಕೆ* *ಕೃಷಿ* *ಬೇಸಾಯ** ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಹಾದೇವಿ ಗೋವನ್ ಕೊಪ್ ತೋಟಗಾರಿಕೆ ಸಹಾಯಕ ಅಧಿಕಾರಿಗಳು ತೋಟಗಾರಿಕೆ ಇಲಾಖೆ ಜೋಯಿಡಾ ಇವರು ಬಂದು ಅಡಿಕೆ ಸಸಿ ನಡುವ ಕುರಿತು ಮತ್ತು ಅಡಿಕೆ ತೋಟ ಮಾಡುವ ವಿಧಾನ ತೋಟಗಾರಿಕೆಯಿಂದ ಸಿಗುವ ಸವಲತ್ತುಗಳು ಮತ್ತು ಅಡಿಕೆ ಗಿಡದ ಎಲೆ ಚಿಕ್ಕಿ ರೋಗಕ್ಕೆ ಬರುವ ರೋಗಗಳ ನಿರ್ವಹಣೆ ಕುರಿತು ತರಬೇತಿ ನೀಡಿದರು ಈ ಸಂದರ್ಭದಲ್ಲಿ ರೈತರಿಂದ ಬಂದ ಪ್ರಶ್ನೆ ಗಳಿಗೆ ಉತ್ತರಿಸಿದರು. ಕಾರ್ಯಕ್ರಮವನ್ನು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಜೋಯಿಡಾ ಇವರು ನಡೆಸಿಕೊಟ್ಟರು.
