Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಡೇರಿಯೆ ಗ್ರಾಮದ ಶ್ರೀ ಸಿದ್ಧನಾಥ ದೇವರ ವಾರ್ಷಿಕೋತ್ಸವ ದಿನಾಂಕ:07/02/2026 ರ ಶನಿವಾರ ನಡೆಯಲಿದೆ. ಪ್ರತಿ ವರ್ಷದಂತೆ ನಡೆಯುವ ಕಾರ್ಯಕ್ರಮದಂತೆ ಮಧ್ಯಾಹ್ನ 12:30 ಗಂಟೆಗೆ ಮಹಾಪೂಜೆ, ಮಹಾಭಿಷೇಕ ನಡೆಯಲಿದ್ದು ಎಲ್ಲ ಭಕ್ತ ವೃಂದದವರು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

Banner Ad

ಮಧ್ಯಾಹ್ನದಿಂದ ರಾತ್ರಿ 9 ಗಂಟೆಯವರೆಗೆ ಅನ್ನಸಂತರ್ಪಣೆ, ಸಂಜೆಯ ವೇಳೆ ಭಜನೆ,ಆರತಿ,ಶ್ರೀ ದೇವರ ಫಲಪಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಲಿದೆ.ರಾತ್ರಿ ಭಕ್ತರ ವಿಶೇಷ ಮನರಂಜನೆಗಾಗಿ ಡೇರಿಯೆ ಗ್ರಾಮದ ಯುವ ಕಲಾವಿದರಿಂದ ವಿಶ್ವಾಸ ಪಾಟೀಲ ವಿರಚಿತ ಸಂಗೀತ ಐತಿಹಾಸಿಕ ಪಾವನ ಖಿಂಡಿಚಾ ರಣ ಜಂಜಾರ ಎಂಬ ಮರಾಠಿ ನಾಟಕದ ಪ್ರದರ್ಶನ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.

Banner Ad