Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ, ಬನವಾಸಿಯ ಖ್ಯಾತ ರಂಗೋಲಿ ಕಲಾವಿದೆ ಗೌರಿ ಶೆಟ್ಟಿ ಅವರು ತಮ್ಮ ಕೈಚಳಕದಲ್ಲಿ ಮೂಡಿಸಿದ ದೇವಿಯ ರಂಗೋಲಿ ಚಿತ್ರ ಭಕ್ತರ ವಿಶೇಷ ಆಕರ್ಷಣೆಗೆ ಪಾತ್ರವಾಗಿದೆ.

Banner Ad

ಜಾತ್ರೆಯ ಸಂಭ್ರಮಕ್ಕೆ ಕಲಾತ್ಮಕ
ಮೆರಗು ನೀಡುವ ನಿಟ್ಟಿನಲ್ಲಿ ಗೌರಿ
ಶೆಟ್ಟಿ ಅವರು ದೇವಿಯ ಭವ್ಯ
ಸ್ವರೂಪವನ್ನು ಬಣ್ಣ ಬಣ್ಣದ ರಂಗುಗಳಿಂದ ಅತ್ಯಂತ ನೈಜವಾಗಿ
ಚಿತ್ರಿಸಿದ್ದಾರೆ. ದೇವಿಯ ಶಿರದಲ್ಲಿನ ಕಿರೀಟಿ, ತೊಟ್ಟಿರುವ ಆಭರಣಗಳು ಹಾಗೂ ಮುಖದಲ್ಲಿನ ದೈವಿಕ ತೇಜಸ್ಸನ್ನು ಅತ್ಯಂತ ಸೂಕ್ಷ್ಮವಾಗಿ ರಂಗೋಲಿಯಲ್ಲಿ ಅರಳಿಸಿದ್ದಾರೆ.

ಕೇವಲ ಬಣ್ಣಗಳ ಬಳಕೆಯಲ್ಲದೆ,ದೇವಿಯ ಮುಖಭಾವದಲ್ಲಿನ ಗಾಂಭೀರ್ಯವನ್ನು ಜೀವಂತವಾಗಿ ಮೂಡಿಸಿರುವುದು. ಕಲಾವಿದೆಯ ಆಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ಕೇವಲ ದೇವಿಯ ಚಿತ್ರ ಮಾತ್ರವಲ್ಲದೆ, ಗೌರಿ ಶೆಟ್ಟಿ ಅವರು ಸ್ವಯಂ ಪ್ರೇರಣೆಯಿಂದ ಸಮಾಜದ ವಿವಿಧ ಕ್ಷೇತ್ರದ ಸಾಧಕರ ಹಾಗೂ ಗಣ್ಯ ವ್ಯಕ್ತಿಗಳ ಚಿತ್ರಗಳನ್ನು ಸಹ ರಂಗೋಲಿ ಮೂಲಕ ರೂಪಿಸಿರುವುದು ಈ ಬಾರಿಯ ವಿಶೇಷವಾಗಿದೆ.

Banner Ad