Banner Ad

ಸುದ್ದಿ ಕನ್ನಡ ವಾರ್ತೆ

ಪಣಜಿ: ಗೋವಾದ ಮೀರಾಮಾರ್ ಬೀಚ್ ಅಲ್ಲಿ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಹಾಡುಹಗಲೇ  ನಡೆದಿರುವ ಈ ಭೀಕರ ಘಟನೆ   ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ ಯಿಂದ ಗೋವಾದ ಬೀಚ್ ಗಳಲ್ಲಿ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Banner Ad

ಶನಿವಾರ ಮಧ್ಯಾಹ್ನ ಸಂತ್ರಸ್ತ ಬಾಲಕಿ ಮೀರಾಮಾರ್ ನಿಂದ ಕರಂಜಾಳೆಗೆ ತನ್ನ ಸಂಬಂಧಿಕರ ಮನೆಗೆ ಹೋಗುತ್ತಿದ್ದಳು. ಅದೇ ಸಮಯದಲ್ಲಿ ಕರಂಜಾಳೆಯಲ್ಲಿ ವಾಸಿಸುವ ಜೀವನ್ ಕುಮಾರ ಎಂಬ ನೇಪಾಳ ಮೂಲದ 22 ವರ್ಷದ ಯುವಕ ಈಕೆಯನ್ನು ಸಂಪರ್ಕಿಸಿ ನಿರ್ಜನ ಪ್ರದೇಶಕ್ಕೆ ಆಮಿಷವುಡ್ಡಿ ಕರೆದೊಯ್ದನು. ಅಲ್ಲಿ ಅವನು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಎನ್ನಲಾಗಿದೆ. ನಂತರ ತೀವ್ರ ಮಾನಸಿಕ ಆಘಾತದಲ್ಲಿದ್ದ ಬಾಲಕಿ ಭಯಭೀತಳಾಗಿ ಮನೆಗೆ ತಲುಪಿದಳು. ನಂತರ ಅವಳು ಇಡೀ ಘಟನೆಯನ್ನು ತನ್ನ ಸಂಬಂಧಿಕರಿಗೆ ವಿವರಿಸಿದಳು ಎನ್ನಲಾಗಿದೆ.

ಸಂತ್ರಸ್ತೆಯ ಸಂಬಂಧಿಕರು ಪೊಲೀಸರನ್ನು ಸಂಪರ್ಕಿಸಿ ಘಟನೆ ಯ ಬಗ್ಗೆ ಮಾಹಿತಿ ನೀಡಿದರು. ಘಟನೆಯ ಗಂಭೀರತೆಯನ್ನು ಅರಿತುಕೊಂಡ ಪಣಜಿ ಪೊಲೀಸ್ ಠಾಣೆಯ ತಂಡವು ಘಟನಾ ಸ್ಥಳಕ್ಕೆ ತೆರಳಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಪೊಲೀಸರು ಸಂತ್ರಸ್ತೆಯ ಅಧಿಕೃತ ಹೇಳಿಕೆಯನ್ನು ದಾಖಲಿಸಿ ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ. ಶಂಕಿತ ಆರೋಪಿಯನ್ನು ಗುರುತಿಸಿ ಈಗಾಗಲೇ ಬಂದಿಸಲಾಗಿದ್ದು ಪೊಲೀಸ್ ಇನ್ಸ್ಪೆಕ್ಟರ್ ವಿಜಯಕುಮಾರ್ ಚೋಡನಕರ್ ರವರ ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ತನಿಕ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

Banner Ad