ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಯಲ್ಲಾಪುರ ಗ್ರಾಮದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಕ್ಟೋಬರ್ 11ರಂದು ಭಾನುವಾರ ಮಧ್ಯಾಹ್ನ 2:30ಕ್ಕೆ ಘಟಸ್ಥಾಪನೆ ನೆರವೇರಲಿದೆ. ಅಕ್ಟೋಬರ್ 19ರಂದು ಸೋಮವಾರ ಮಹಾನವಮಿ, ದಿನಾಂಕ 20 ರಂದು ಮಂಗಳವಾರ ವಿಜಯದಶಮಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿದಿನ ರಾತ್ರಿ 8:30 ರಿಂದ ಹರಿಕೀರ್ತನ ಕಲಾವಿದೆ ಶ್ರೀಮತಿ ನಾಗರತ್ನ ವಿನಾಯಕ ಜೋಶಿ (ದಿ. ಹರಿದಾಸ ಶ್ರೀ ನಿವಣೆ ಗಣೇಶ್ ಭಟ್ ರವರ ಪುತ್ರಿ) ರವರಿಂದ ಹರಿ ಕೀರ್ತನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನವರಾತ್ರಿ ಸಮಯದಲ್ಲಿ ದೇವಿಯರಿಗೆ ಸಲ್ಲಿಸುವ ಹುಳಿ ಸಾಮಾನು ಮತ್ತು ತಯಾರ ಹೂಡಿ ವ್ಯವಸ್ಥೆ ಶ್ರೀ ದೇವಸ್ಥಾನದಲ್ಲಿ ಲಭ್ಯವಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಕೃತಾರ್ಥರಾಗಬೇಕಾಗಿ ದೇವಸ್ಥಾನ ಟ್ರಸ್ಟ್ ಮಂಡಳಿ ಮನವಿ ಮಾಡಿದೆ.
ದೇವಿಯರಿಗೆ ಪ್ರತಿದಿನ ಬೆಳಿಗ್ಗೆ 8:30 ರಿಂದ ರಾತ್ರಿ 8:30ರ ವರೆಗೆ ಸೇವೆ ಸಲ್ಲಿಸಬಹುದಾಗಿದೆ.
