ಸುದ್ದಿ ಕನ್ನಡ ವಾರ್ತೆ

ಶಿರಸಿ: ಪಡೆದ ಸಾಲ ತೀರಿಸಿದ ಕಾರಣ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿರಸಿಯ ರವೀಶ್ ಹೆಗಡೆ ಎಂಬಾತರನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತಂತೆ ಲಭ್ಯವಾದ ಮಾಹಿತಿ ಅನುಸಾರ ರವೀಶ್ ವೆಂಕಟ್ರಮಣ ಹೆಗಡೆ ರವರು ಭಟ್ಕಳದ ಈಶ್ವರ ಹೊನ್ನಪ್ಪ ನಾಯಕ್ ರವರ ಬಳಿ ಸಾಲ ಪಡೆದಿದ್ದರು. ಪಡೆದ ಸಾಲ ತೀರಿಸಲು ಈಶ್ವರ್ ನಾಯಕ್ ರವರಿಗೆ ಚೆಕ್ ನೀಡಿದ್ದರು. ಆದರೆ ಈ ಚೆಕ್ಕನ್ನು ಈಶ್ವರ್ ನಾಯಕರವರು ತಮ್ಮ ಬ್ಯಾಂಕ್ ಖಾತೆಗೆ ಹಾಕಿದಾಗ ರವೀಶ್ ಹೆಗಡೆ ಖಾತೆಯಲ್ಲಿ ಹಣವಿಲ್ಲದೆಯೇ ಚೆಕ್ ಬೌನ್ಸ್ ಆಗಿತ್ತು. ಸಾಲ ತೀರಿಸುವಂತೆ ಹಲವು ಬಾರಿ ಸೂಚಿಸಿದರು ಕೂಡ ರವಿಶ ಹೆಗಡೆ ಸಾಲ ಪಾವತಿ ಮಾಡಿರಲಿಲ್ಲ ಈ ಹಿನ್ನೆಲೆಯಲ್ಲಿ ಈಶ್ವರ ನಾಯಕ್ ರವರು ದೂರು ದಾಖಲಿಸಿದ್ದರು.

ಈ ಪ್ರಕರಣದ ಅನ್ವಯ ನ್ಯಾಯಾಲಯವು ರವೀಶ್ ಹೆಗಡೆ ರವರ ವಿರುದ್ಧ ವಾರಂಟ್ ಜಾರಿ ಮಾಡಿದ್ದು, ಆಗಲೂ ಕೂಡ ರವಿ ಹೆಗಡೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ರವೀಶ್ ಹೆಗಡೆ ರವರು ಶಿರಸಿಯ ಮನೆಯಲ್ಲಿರುವಾಗಲೇ ಪೊಲೀಸರು ದಾಳಿ ಮಾಡಿದ್ದಾರೆ. ವ್ಯಕ್ತಿಯೊಬ್ಬರ ಆತ್ಮಹತ್ಯೆ ಪ್ರಕರಣ, ಕೆಡಿಸಿಸಿ ಕಾರು ಸಾಲ ಹಗರಣ ಸೇರಿ ಇನ್ನೂ ಕೆಲ ಪ್ರಕರಣದಲ್ಲಿ ರವೀಶ್ ಹೆಗಡೆ ಆರೋಪಿಯಾಗಿದ್ದಾರೆ.