ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ತೋಟಗಾರಿಕಾ ಇಲಾಖೆ ಬೆಳಗಾವಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಖಾನಾಪೂರ ಹಾಗೂ ಸ್ಕೊಡ್ ವೆಸ್ ಸಂಸ್ಥೆ ಶಿರಸಿ ಸಹಯೋಗದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಖಾನಾಪೂರ ತಾಲೂಕಿನ ಗ್ರಾಮ ಪಂಚಾಯತದ ವ್ಯಾಪ್ತಿಯ ರೈತ ಬಾಂಧವರು ದಿನಾಂಕ:27-09-2026 ರವಿವಾರ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳ-2026 ದಲ್ಲಿ ಭಾಗವಹಿಸುವ ಮೂಲಕ ಉಪಯುಕ್ತ ಮಾಹಿತಿ ಪಡೆದುಕೊಂಡರು.

 

ಕೃಷಿ ಮೇಳದಲ್ಲಿ ಬೆಳೆ ಪ್ರದರ್ಶನ,ವಸ್ತು ಪ್ರದರ್ಶನಾಲಯ,ಫಲ ಪುಷ್ಪ ಪ್ರದರ್ಶನ,ಹಾಲಿನ ಡೇರಿ, ಜಾನುವಾರ ಪ್ರದರ್ಶನ, ಪ್ರಾಣಿಗಳ ದರ್ಶನ, ಫ್ಯಾಬ್ರಿಕೇಟೆಡ್ ಸ್ಟಾಲ್, ಎಕಾನಮಿ ಸ್ಟಾಲ್,ಕೃಷಿ ಕಾರ್ಯಕ್ರಮದ ವೇದಿಕೆ, ತೋಟಗಾರಿಕೆ ನರ್ಸರಿ, ತೋಟಗಾರಿಕೆ ಬ್ಲಾಕ್,ಚಿಕ್ಕು ಮತ್ತು ಪೇರಲ ತೋಟಗಾರಿಕೆ, ತೋಟಗಾರಿಕಾ ವಿಭಾಗ, ಸಾವಯವ ಕೃಷಿ ಸಂಸ್ಥೆ,ಕೃಷಿ ಯಂತ್ರೋಪಕರಣಗಳ ಪ್ರದರ್ಶನ,ಆಹಾರ ಮಳಿಗೆಗಳು, ತೆಂಗಿನ ತೋಪು,ಬೀಜ ಗೋದಾಮು,ಬೀಜ ಸಂಸ್ಕರಣಾ ಘಟಕ,ಬೀಜ ಸಂಶೋಧನಾ ಪ್ರಯೋಗಾಲಯ,ಕೆವಿಕೆ,ಸೈದಾಪುರ ಹೈಟೆಕ್ ತೋಟಗಾರಿಕೆ ಇನ್ನಿತರ ವಿವಿಧ ಸ್ಟಾಲ್ ಗಳನ್ನು ವೀಕ್ಷಿಸಿ,ಯೋಗ್ಯ ಮಾಹಿತಿ ಉಪಯುಕ್ತ ವಸ್ತುಗಳನ್ನು ಖರೀದಿಸಿ,ಕೃಷಿ ಮೇಳದಲ್ಲಿ ತಾಲೂಕಿನ ರೈತರು ಲಾಭ ಪಡೆದುಕೊಂಡರು. ಜಿಲ್ಲೆಯ ಹಾಗೂ ತಾಲೂಕಿನ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಿರಸಿ ಸ್ಕೊಡ್ ವೆಸ್ ಸಂಸ್ಥೆಯ ವಿನಾಯಕ ಪೈ ಅವರು ಕೃಷಿ ಮೇಳದಲ್ಲಿ ಭಾಗವಹಿಸುವ ಉದ್ದೇಶದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ರಾಜೇಶ,ಸಂಜಯ,ಕೃಷ್ಣ,ಹನುಮಂತ ಹಾಗೂ ಮಂದಾ ಭಾಗವಹಿಸಿದ್ದ ರೈತ ಬಾಂಧವರಿಗೆ ಯೋಗ್ಯವಾದ ಎಲ್ಲಾ ರೀತಿಯ ಸಲಹೆ, ಸೂಚನೆ,ಮಾರ್ಗದರ್ಶನ ಮಾಡಿ ಕೃಷಿ ಮೇಳದಲ್ಲಿ ಭಾಗವಹಿಸಲು ಸಹಾಯ ಮಾಡಿದರು.