ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರದ ಪಟ್ಟಣದ ಕಾಳಮ್ಮನಗರದ ಬೀದಿಗಳಲ್ಲಿ ಬೀದಿ ನಾಯಿಗಳು ಮತ್ತು ಹಂದಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶನಿವಾರ ಭೀಕರ ಘಟನೆ ಎಂದು ನಡೆದಿದ್ದು ನಾಯಿ ಪುಟ್ಟ ಬಾಲಕನ ಮೇಲೆ ಭೀಕರ ದಾಳಿ ನಡೆದಿದೆ.
ಯಲ್ಲಾಪುರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪಟ್ಟಣ ಪಂಚಾಯಿತ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಇಷ್ಟೇ ಅಲ್ಲದೆ ಪಟ್ಟಣದಾದ್ಯಂತ ಹಂದಿಗಳ ಕಾಟ ಕೂಡ ಹೆಚ್ಚಾಗಿದ್ದು, ಜನತೆ ಹಂದಿಗಳ ಉಪಟಳದಿಂದ ಕೂಡ ಬೇಸತ್ತಿದ್ದಾರೆ.
ಕಾಳಮ್ಮನಗರದಲ್ಲಿ ಈಗಾಗಲೇ ಈ ನಾಯಿಗಳು ನಾಲ್ಕೈದು ಜನರ ಮೇಲೆ ಭೀಕರ ಧಾಳಿ ನಡೆಸಿವೆ. ಜನತೆ ಮನೆಯಿಂದ ಹೊರಗೆ ಓಡಾಡಲು ಕೂಡ ಭಯಪಡುವಂತ ವಾತಾವರಣ ಸೃಷ್ಟಿಯಾಗಿದೆ.
ಇನ್ನೆಷ್ಟು ಕಂದಮ್ಮಗಳು ಈ ರೀತಿ ತೊಂದರೆಗೋಳಗಾಗಬೇಕೆ,,,? ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವರೇ,,,? ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ
