ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ 16 ಗ್ರಾಮ ಪಂಚಾಯತ ಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ 2026 ಆಂದೋಲನ ಕಾರ್ಯಕ್ರಮ ದಡಿಯಲ್ಲಿ ಮಹಾತ್ಮ ಗಾಂಧಿಯವರ ಜಯಂತಿಯ ಪ್ರಯುಕ್ತ ಒಂದು ಸಪ್ತಾಹದ ಕಾರ್ಯಕ್ರಮದ ಮೂಲಕ ಸ್ವಚ್ಛತೆಯ ಕಾರ್ಯಕೈಕೊಳ್ಳ ಲಾಗಿದೆ.
ಜೊಯಡಾ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕರ ಮತ್ತು ಇಲಾಖೆಗಳ ಸಹಭಾಗಿತ್ವದ ಮೂಲಕ ಈ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ರಾದ ಶ್ರೀಮತಿ ಭಾರಥಿ ಎನ್ ಅವರು ತಿಳಿಸಿದ್ದಾರೆ. ತಾಲೂಕಿನ ಆದ್ಯಂತ ಸ್ವಚ್ಛತಾ ಕಾರ್ಯ ಕೈಕೊಳ್ಳಲಾಗುತ್ತಿದೆ, ಕಳೆದ ವರ್ಷ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಸ್ವಚ್ಛತಾ ಕಾರ್ಯಕ್ಕೆ ತಾಲೂಕಿನಲ್ಲಿ ಒಂದು ತಿಂಗಳುಗಳ ಕಾಲ ನಿರಂತರ ಶ್ರಮಿಸುತ್ತಾ ಜನರಲ್ಲಿ ಜಾಗೃತಿ ಮೂಡಿಸಿದ್ದರು, ಇದರಿಂದ ಜನರು ಕೂಡ ಸಹಕಾರ ನೀಡಿದ್ದರು, ಈ ವರ್ಷ ಕೂಡ ಶಾಸಕರು ಸ್ವಚ್ಛತೆ ಕೈಕೊಳ್ಳಲು ಈಗಾಗಲೇ ತಿಳುಸಿರುತ್ತಾರೆ. ಅದರಂತೆ ತಾಲೂಕಾ ಆಡಳಿತ ಮತ್ತು ಗ್ರಾಮ ಪಂಚಾಯತ್ ದವರು ತಾಲೂಕಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದ್ದಾರೆ, ಇದಕ್ಕೆಲ್ಲ ಸ್ಥಳೀಯರು ಮತ್ತು ರೆಸಾರ್ಟ್ ನವರು, ಅಂಗಡಿ ಮುಂಗಟ್ಟು, ಹೋಟೆಲ್ ನವರು ಸಹಕರಿಸಬೇಕಾಗಿದೆ. ತಾಲೂಕಿನಲ್ಲಿ, ಹೆಚ್ಚಾಗಿ ಪ್ರವಾಸಿಗರು ಬರುತ್ತಿದ್ದು, ಅವರು ರಸ್ತೆ ಅಕ್ಕ ಪಕ್ಕ ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ್ ಗಳನ್ನು ಇನ್ನಿತರ ತ್ಯಾಜ್ಯ ಗಳನ್ನು ಎಸೆಯುವುದು ಮಾಮೂಲಿ ಯಾಗಿದೆ. ಇದನ್ನು ತಡೆಗಟ್ಟುವ ಕೆಲಸ ವನ್ನು ಅರಣ್ಯ ಇಲಾಖೆ ಮತ್ತು ಸಂಬಂಧ ಪಟ್ಟ ರಸ್ತೆ ಇಲಾಖೆ ಗಳು ಮಾಡಬೇಕು, ಈ ಬಗ್ಗೆ ಸಂಬಂಧ ಪಟ್ಟ ಗ್ರಾಮ ಪಂಚಾಯತ್ ಗಳು ತಮ್ಮ ಪಂಚಾಯತ್ ವ್ಯಾಪ್ತಿಯ ಜವಾಬ್ದಾರಿ ನಿರ್ವಹಿಸಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಈ ಕುರಿತು ಸಂಬಂಧ ಪಟ್ಟ ಇಲಾಖೆಯವರೊಂದಿಗೆ, ತಾಲೂಕಾ ಆಡಳಿತ ಸಭೆ ನಡೆಸಿ ಅಗತ್ಯ ಕ್ರಮ ಕೈಕೊಂಡರೆ ತಾಲೂಕಿನಲ್ಲಿ ವರ್ಷ ವಿಡಿ ಸ್ವಚ್ಛತೆ ಯನ್ನು ಕಾಣಬಹುದಾಗಿದೆ,ಎಂದು ಹೇಳಲಾಗುತ್ತಿದೆ
