ಸುದ್ದಿ ಕನ್ನಡ ವಾರ್ತೆ
ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ದಿವಸ 98 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಶೀಘ್ರ 1 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಲಿದೆ ಎಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಭರವಸೆ ವ್ಯಕ್ತಪಿಡಿಸಿದರು.

ತಾಲೂಕಿನ ನಕ್ಷೆ ಹಾಲು ಉತ್ಪಾದಕರ ಸಹಕಾರ ಸಂಘ ನಿಯನಿತ ಇದರ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೈನುಗಾರಿಕೆ ಮುಗಿಯಿತು ಎನ್ನುವಾಗ ಉತ್ತಮವಾಗಿ ನಡೆಯುತ್ತಿದೆ. ಅದೇ ರೀತಿ ಧಾರವಾಡ ಹಾಲು ಒಕ್ಕೂಟವೂ ಈ ಬಾರಿ 17 ಕೋಟಿ ರೂ ನಷ್ಟು ಲಾಭ ಮಾಡಿದೆ. ಅದರಲ್ಲಿ ರೈತರ – ಹಾಲು ಸಂಘಗಳ ಕಲ್ಯಾಣ ಮಾಡಲಾಗುತ್ತಿದೆ ಎಂದರು.

ಧಾರವಾಡ ಹಾಲು ಒಕ್ಕೂಟದಿಂದ ಹೈನುಗಾರಿಕೆ ಪ್ರೋತ್ಸಾಹಿಸಲು ಒಂದು ಹಿಂಡಿ ಚೀಲಕ್ಕೆ ಸಂಘಕ್ಕೆ ಹಾಗೂ ಕಾರ್ಯದರ್ಶಿಗೆ 20-20 ರೂ ನಂತೆ ನೀಡಲಾಗುತ್ತಿದಸ. ಹಿಂಡಿ ದರವನ್ನೂ 35 ರೂ ಕಡಿಮೆ ಮಾಡಲಾಗಿದೆ. ಪ್ರತಿ ಸಂಘಗಳಿಗೆ ಮಿಲ್ಕ್ ಆನಲೈಸರ್ ಗಳನ್ನು ಉಚಿತವಾಗಿ ನೀಡಲಾಗಿದೆ. ಹೀಗೆ ಒಕ್ಕೂಟದ ಲಾಭದ ಹಣದಲ್ಲಿ ಸಂಘ – ರೈತರಿಗೆ ಅಮುಕೂಲ ಮಾಡಿಕೊಡಲಾಗಿದ್ದು, ಶೀಘ್ರದಲ್ಲಿ
೧ ಲೀಟರ್ ಹಾಲಿಗೆ ೫ ರೂ ಮಾರಾಟ ದರ ಹೆಚ್ಚಾಗಲಿದೆ. ಅದನ್ನೂ ಸಹ ರೈತರಿಗೇ ನೀಡಲು ಒಕ್ಕೂಟ ತಿರ್ಮಾನಿಸಿದೆ ಎಂದರು.

ನಕ್ಷೆ ಹಾಲು ಉತ್ಪಾದಕ ಸಂಘದಲ್ಲಿ ಪ್ರಾಮಾಣಿಕತೆ – ಪಾರದರ್ಶಕತೆ ಎರಡೂ ಇದೆ. ನಮ್ಮ ಸಂಘ ಎಂಬ ಹೆಮ್ಮೆಯೊಂದಿಗೆ ಇಲ್ಲಿ ಹಾಲು ವ್ಯವಹಾರವನ್ನು ಮಾಡಲಾಗುತ್ತದೆ. ಕಲ್ಯಾಣ ಸಂಘದ ಅಧ್ಯಕ್ಷನಾಗಿ ಜಿಲ್ಲೆಯಲ್ಲಿ ಓಡಾಟ ಮಾಡುತ್ತೇನೆ. ಇಲ್ಲಿನ ಜನರಿಗೆ ಭಾವನಾತ್ಮಕ ಸಂಬಂಧವಿದೆ ಎಂದರು. ಹಿಂಡಿ ಗೋದಾಮು ನಿರ್ಮಾಣಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಕೆಶಿನ್ಮನೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಂಘದಲ್ಲಿ ಅತಿ ಹೆಚ್ಚು ಹಾಲು ಹಾಕಿದವರಿಗೆ ಸ್ಟಿಲ್ ಕ್ಯಾನ್ ನೀಡಲಾಯಿತು. ಸಂಘದ ಅಧ್ಯಕ್ಷ ಸುರೇಶ ಹೆಗಡೆ ನಕ್ಷೆ ಮಾತನಾಡಿ, ಸಂಘವು 38 ಸಾವಿರ ರೂ ಲಾಭ ಗಳಿಸಿದೆ. ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸಣ್ಣ ಗ್ರಾಮದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಒಕ್ಕೂಟದಿಂದಲೂ ಹೆಚ್ಚಿನ ಸಹಕಾರ ದೊರೆತಿದೆ ಎಂದರು. ಉಪಾಧ್ಯಕ್ಷ ರಮಾಕಾಂತ ಹೆಗಡೆ ಸೇರಿದಂತೆ ಊರಿನ ಪ್ರಮುಖರಾದ ರಾಜಾರಾಮ ಹೆಗಡೆ, ಸುಬ್ರಾಯ ಹೆಗಡೆ, ಮಂಜುನಾಥ ಹೆಗಡೆ, ದಯಾನಂದ ಹೆಗಡೆ ಇನ್ನಿತರು ಇದ್ದರು. ಸಂಘದ ಕಾರ್ಯದರ್ಶಿ ಎಮ್.ಟಿ.ಹೆಗಡೆ ವಾರ್ಷಿಕ ಲೆಕ್ಕ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿಗೆ
ಬಲೂನ್ ಗ್ಯಾಸ್ ನಿರ್ಮಾಣ ಮಾಡಲಾಗುತ್ತಿದೆ. ಒಂದು ಆಕಳು ಇದ್ದಲ್ಲಿ ನಾಲ್ಕೈದು ಜನರಿಗೆ ಅನುಕೂಲ ಇದೆ. ರೈತರು ಹೆಚ್ಚಿನ ಗಮನ ಹರಿಸಬೇಕಿದೆ. ಮನೆಗೊಂದು ಆಕಳು ಕಟ್ಟುವ ಮೂಲಕ ಗೋಮಾತೆಯ ಪೂಜೆಯ ಜೊತೆಗೆ ಹೈನುಗಾರಿಕೆ ಮಾಡಲು ಮುಂದಾಗಬೇಕಿದೆ.
ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಧಾರವಾಡ ಹಾಲು ಒಕ್ಕೂಟ ಉಪಾಧ್ಯಕ್ಷ