ಸುದ್ದಿ ಕನ್ನಡ ವಾರ್ತೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಮೃದ್ಧ ಪರಂಪರೆ, ಸಂಸ್ಕೃತಿ ಹಾಗೂ ಮಣ್ಣಿನ ಸೊಗಡನ್ನು ಬೆಳ್ಳಿತೆರೆಯ ಮೇಲೆ ಸೊಗಸಾಗಿ ಕಟ್ಟಿಕೊಟ್ಟಿರುವ ‘ಕಾನ್ದಾರಿ’ ಚಲನಚಿತ್ರವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯಲ್ಲಿ ಕುಟುಂಬ ಸಮೇತರಾಗಿ ವೀಕ್ಷಿಸಿದರು.
ಚಿತ್ರದ ಹೃದಯಸ್ಪರ್ಶಿ ಹಾಡುಗಳು, ಉತ್ತಮ ನಿರೂಪಣೆ ಹಾಗೂ ಉತ್ತರ ಕನ್ನಡದ ಮಣ್ಣಿನ ಕಂಪನ್ನು ಕಟ್ಟಿಕೊಟ್ಟಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂತಹ ಉತ್ತಮ ಪ್ರಯತ್ನಕ್ಕೆ ಕೈಹಾಕಿ ಸಿನಿಮಾ ನಿರ್ಮಿಸಿರುವ ವಿನಾಯಕ ಹೆಗಡೆ ಮತ್ತು ಸುಪ್ರೀತ ಹೆಗಡೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ಉತ್ತಮ ಕಥಾವನ್ನು ಹಾಗೂ ಸದಾಭಿರುಚಿಯ ಇಂತಹ ಸಿನಿಮಾಗಳಿಗೆ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಅವರು ಕರೆ ನೀಡಿದರು.
