ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಗಣೇಶೋತ್ಸವದ ಪೆಂಡಾಲ್ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕೃತ್ಯ ಎಸಗಿದವರನ್ನು ಮಾತ್ರವಲ್ಲದೆ, ಇದರ ಹಿಂದೆ ಯಾರಾದರೂ ಪ್ರಚೋದನೆ ನೀಡಿದ್ದಾರೆಯೇ ಅಥವಾ ಸಂಘಟಿತ ಸಂಚು ನಡೆದಿದೆಯೇ ಎಂಬುದನ್ನೂ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಭಟ್ಕಳ ಘಟಕ ಆಗ್ರಹಿಸಿದೆ.
ಈ ಕುರಿತು ಲಿಖಿತ ಹೇಳಿಕೆಯನ್ನು ನೀಡಿರುವ ಸಂಘಟನೆಯ ಪ್ರಮುಖರು ಘಟನೆಗೆ ಸಂಬAಧಿಸಿದAತೆ ಪೊಲೀಸರು ಈಗಾಗಲೇ ಕೈಗೊಂಡಿರುವ ಕ್ರಮವನ್ನು ಸ್ವಾಗತಿಸಿದ್ದು, ಕಲ್ಲು ತೂರಾಟದ ನೈಜ ಕಾರಣ ಹಾಗೂ ಹಿನ್ನೆಲೆಯನ್ನು ಪತ್ತೆಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಕೃತ್ಯಕ್ಕೆ ನೇರವಾಗಿ ಭಾಗಿಯಾದವರ ಜತೆಗೆ, ಅವರಿಗೆ ಪ್ರಚೋದನೆ, ಕುಮ್ಮಕ್ಕು ಅಥವಾ ಸಹಕಾರ ನೀಡಿದವರಿದ್ದರೆ ಅವರನ್ನೂ ತನಿಖೆಯ ವ್ಯಾಪ್ತಿಗೆ ತರಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಯಾವುದೇ ರೀತಿಯ ಪ್ರಚೋದನಕಾರಿ ಸಂದೇಶ ಅಥವಾ ಸುಳ್ಳು ಮಾಹಿತಿ ಹರಡಲಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದೂ ವೇದಿಕೆ ಮನವಿ ಮಾಡಿದೆ.
ಭಟ್ಕಳದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
