ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ತಾಲೂಕಿನ ಹಳವಳ್ಳಿ ಪುನರ್ವಸತಿ ಕೇಂದ್ರದ ಮನೆಯೊಂದಕ್ಕೆ ಕಳ್ಳರು ನುಗ್ಗಿ ಅಡಿಕೆ ಕಳ್ಳತನ ನಡೆಸಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಳವಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ರಾಮಕೃಷ್ಣ ನರಸಿಂಹ ಹರಿಮನೆ ಅವರ ಮನೆ ಕಳ್ಳತನಕ್ಕೆ ಒಳಗಾಗಿದೆ. ತಾವು ಬೆಳೆದ ಅಡಿಕೆಯನ್ನು ಅವರು ಸಂಸ್ಕರಿಸಿ ತಲಾ 71 ಕೆಜಿಯಂತೆ ಚೀಲ ತುಂಬಿಸಿ ಅದನ್ನು ತಮ್ಮ ಮನೆ ಹಿಂದಿನ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದರು.
ಸೆ. 14ರ ಬೆಳಗ್ಗೆ 10 ಗಂಟೆಯವರೆಗೂ ಅವರ ಗೋದಾಮಿನಲ್ಲಿದ್ದ ಎಲ್ಲ ಅಡಿಕೆಗಳು ಸರಿಯಾಗಿಯೇ ಇದ್ದವು. ಸೆ. 18ರ ಬೆಳಗ್ಗೆ 10 ಗಂಟೆಗೆ ಗಮನಿಸಿದಾಗ ಮೂರು ಅಡಿಕೆ ಚೀಲ ಕಡಿಮೆ ಕಾಣಿಸಿದೆ. ಗೋದಾಮಿನ ಬಾಗಿಲ ಲಾಕ್ ಮುರಿದ ಕಳ್ಳರು ಒಳಗೆ ನುಗ್ಗಿ ಅಡಿಕೆ ಚೀಲ ಅಪಹರಿಸಿದ್ದಾರೆ. ಅದರಿಂದ 90 ಸಾವಿರ ರೂ. ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚಿ, ತನ್ನ ಅಡಿಕೆ ವಾಪಸ್ ಕೊಡಿಸುವಂತೆ ರಾಮಕೃಷ್ಣ ಹರಿಮನೆ ದೂರು ನೀಡಿದ್ದಾರೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
