ಸುದ್ದಿ ಕನ್ನಡ ವಾರ್ತೆ
ಕಾರವಾರ :ನಗರದ ಅಂಬೇಡ್ಕರ್ ಸರ್ಕಲ್ ಬಳಿ ಇರುವ ತಾಜ್ ಹೋಟೆಲ್ ನಲ್ಲಿ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಪೈಪ್ ಕಡಿತವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟುಹೋದ ಘಟನೆ ನಡೆದಿದೆ.
ಏಕಾಎಕಿ ಅಡುಗೆ ಮನೆಯ ಸಿಲಿಂಡರ್ ಪೈಪ್ ಕಡಿತವಾಗಿ ತಗುಲಿಕೊಂಡ ಬೆಂಕಿ ಹೋಟೆಲ್ ನ ಒಳಭಾಗದಲ್ಲಿ ಉಳಿದ ಸರಕು ಸಾಮಾನು ತೀವ್ರ ಸುಟ್ಟುಹೋಗಿದೆ.
ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು ದೊಡ್ಡ ಪ್ರಮಾಣದ ಹಾನಿ ತಪ್ಪಿಸಿದ್ದು ಒಟ್ಟು ಎಷ್ಟು ಹಾನಿಯಾಗಿದೆ ಎಂಬುದು ತಿಳಿದುಬರಬೇಕಿದೆ.
